ETV Bharat / state

ಸಚಿವ ಅಶೋಕ್ ವಿರುದ್ಧ ಬಾಯ್ಕಾಟ್ ಅಭಿಯಾನ: ಸ್ವಪಕ್ಷದವರಿಂದಲೇ ಅಸಮಾಧಾನ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇಲ್ಲಿಯವರೆಗೆ ಸಚಿವ ಕೆ ಗೋಪಾಲಯ್ಯ ಅವರ ಕೈಯ್ಯಲ್ಲಿದ್ದ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನಿನ್ನೆ ಆರ್​ ಅಶೋಕ್​ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಹಿಸಿದ್ದಾರೆ. ಇದರ ಬೆನ್ನಲ್ಲೆ ತೀವ್ರ ಆಕ್ರೋಶ ಹೊರಬಿದ್ದಿದೆ.

boycott campaign against minister ashok
ಸಚಿವ ಅಶೋಕ್ ವಿರುದ್ಧ ಬಾಯ್ಕಾಟ್ ಅಭಿಯಾನ
author img

By

Published : Jan 26, 2023, 4:58 PM IST

Updated : Jan 26, 2023, 7:46 PM IST

ಸಚಿವ ಅಶೋಕ್ ವಿರುದ್ಧ ಸಚಿವ ಅಶೋಕ್ ವಿರುದ್ಧ

ಮಂಡ್ಯ: ಆರ್. ಅಶೋಕ್‌ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯ ಬಿಜೆಪಿಯಲ್ಲಿ ಅಸಮಾಧಾನ ತೀವ್ರಗೊಂಡಿದೆ. ನಿನ್ನೆಯಷ್ಟೇ ಗೋ ಬ್ಯಾಕ್ ಅಶೋಕ್ ಅಭಿಯಾನ ಆರಂಭಿಸಿದ್ದವರು ಇದೀಗ ಬಾಯ್ಕಾಟ್ ಪೋಸ್ಟರ್ ಹಾಕ್ತಿದ್ದಾರೆ. ಅಶೋಕ್ ಮಂಡ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡ್ತಾರೆ. ಅಶೋಕ್‌ ಅವರಿಂದ ಮಂಡ್ಯದಲ್ಲಿ ಬಿಜೆಪಿ ಬೆಳೆಯಲ್ಲ. ಅಶೋಕ್ ಗೋ ಬ್ಯಾಕ್ ಎಂಬ ಕೂಗು ಕೇಳಿ ಬರ್ತಿದೆ. ಒಂದೆಡೆ ಗೋ ಬ್ಯಾಕ್, ಬಾಯ್ಕಾಟ್ ಅಭಿಯಾನ ಮಾಡಿದ್ರೆ. ಮತ್ತೊಂದೆಡೆ ಬಹಿರಂಗವಾಗಿಯೇ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ದಿಢೀರ್ ಬದಲಾವಣೆ ಮಂಡ್ಯ ಬಿಜೆಪಿಯಲ್ಲಿ ಬಂಡಾಯ ಭುಗಿಲೇಳುವಂತೆ ಮಾಡಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ನೇಮಕವಾಗ್ತಿದ್ದಂತೆ ಸಚಿವ ಆರ್.ಅಶೋಕ್ ವಿರುದ್ಧ ಸ್ವಪಕ್ಷೀಯರೇ ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಅಭಿಯಾನ ನಡೆಸಿದರು. ಅದರ ಮುಂದುವರಿದ ಭಾಗವಾಗಿ ಇಂದು ಗೋಡೆಗಳಿಗೆ ಪೋಸ್ಟರ್ ಅಂಟಿಸುವ ಗೋ ಬ್ಯಾಕ್ ಜೊತೆಗೆ ಬಾಯ್ಕಾಟ್ ಮಾಡುವ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕ್ತಿದ್ದಾರೆ. ಮಂಡ್ಯದ ಆರ್.ಪಿ.ರಸ್ತೆ, ಸ್ಟೇಡಿಯಂ ರಸ್ತೆ ಹಾಗೂ ಇಂಡುವಾಳು ಸೇರಿದಂತೆ ಹಲವೆಡೆ ಪೋಸ್ಟರ್ ಅಂಟಿಸಿ, ಸಚಿವ ಆರ್. ಅಶೋಕ್ ನೇಮಕವನ್ನು ವಿರೋಧ ಮಾಡ್ತಿದ್ದಾರೆ.

ಬಹಿರಂಗವಾಗಿಯೇ ಅಸಮಾಧಾನ: ಇನ್ನು ಸೋಷಿಯಲ್ ಮೀಡಿಯಾ ಮತ್ತು ಪೋಸ್ಟರ್ ಗಳ ಮೂಲಕ ಪರೋಕ್ಷವಾಗಿ ಪ್ರತಿರೋಧ ವ್ಯಕ್ತಪಡಿಸ್ತಿರೋದು ಒಂದೆಡೆಯಾದರೆ. ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಹಿರಿಯ ಬಿಜೆಪಿ ನಾಯಕ ಯತ್ತಗದಹಳ್ಳಿ ಡಾ.ಸಿದ್ದರಾಮಯ್ಯ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕಳೆದ ಲೋಕಸಭಾ ಪರಾಜಿತ ಅಭ್ಯರ್ಥಿಯಾಗಿರುವ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿ ಮತ್ತು ರಾಷ್ಟ್ರೀಯ ಪರಿಷತ್ ಸದಸ್ಯರಾಗಿರುವ ಸಿದ್ದರಾಮಯ್ಯ, ಅಶೋಕ್ ವಿರುದ್ಧ ಹೊಂದಾಣಿಕೆ ರಾಜಕಾರಣದ ಆರೋಪ ಇದೆ.

ಈ ಹಿಂದೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದರಂತೆ. ಪಕ್ಷದ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳಲ್ಲ ಎನ್ನುವ ಆರೋಪ ಕೂಡ ಇದೆ. ಚುನಾವಣೆ ಹೊಸ್ತಿಲಲ್ಲಿ ಜಿಲ್ಲಾ ಉಸ್ತುವಾರಿ ಬದಲಾವಣೆ ಅವಶ್ಯಕತೆ ಇರಲಿಲ್ಲ. ನನಗೆ ಸಾಕಷ್ಟು ಕಾರ್ಯಕರ್ತರು ಕರೆ ಮಾಡ್ತಿದ್ದಾರೆ. ಮತ್ತೆ ಹೊಂದಾಣಿಕೆ ಬಗ್ಗೆ ಆತಂಕ, ದುಗುಡ ವ್ಯಕ್ತಪಡಿಸ್ತಿದ್ದಾರೆ. ನಮಗೆ ಪಕ್ಷ ಮತ್ತು ಕಾರ್ಯಕರ್ತರ ಹಿತವೇ ಮುಖ್ಯ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವಷ್ಟು ದೊಡ್ಡವನಲ್ಲ. ಆದರೆ, ನಾನು ಪಕ್ಷಕ್ಕೆ ನಿಷ್ಠಾವಂತ ಆಗಿದ್ದೇನೆ. ಜಿಲ್ಲೆಯ ಪರಿಸ್ಥಿತಿ ಬಗ್ಗೆ ವರಿಷ್ಠರ ಗಮನಕ್ಕೆ ತರುವ ಕೆಲಸ ಮಾಡ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಕಾಂಗ್ರೆಸ್​​- ಜೆಡಿಎಸ್​ಗೆ ಭಯ ಎಂದ ಅಶೋಕ್​: ಮಂಡ್ಯ ಜಿಲ್ಲೆಗೆ ಅಶೋಕ್ ಬಂದಿರೋದಕ್ಕೆ ಕಾಂಗ್ರೆಸ್- ಜೆಡಿಎಸ್​ಗೆ ಭಯ ಹುಟ್ಟಿದೆ. ನನ್ನ ಮೇಲೆ ಷಡ್ಯಂತ್ರ ರೂಪಿಸೋಕೆ ಯಾರಿಗೂ ಧೈರ್ಯ ಇಲ್ಲ ಎಂದು ಮಂಡ್ಯದಲ್ಲಿ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ. ವಿರೋಧದ ವಿಚಾರವಾಗಿ ಮಾತನಾಡಿದ ಅವರು, ಅಶೋಕ್ ಯಾವ ಹೊಂದಾಣಿಕೆ ರಾಜಕಾರಣ ಮಾಡಲ್ಲ. ಇದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ. ಅತರಹದ್ದು ಯಾವುದು ಸಹ ಇಲ್ಲ. ಉಸ್ತುವಾರಿ ಸಚಿವರಿಗಾಗಿ 2 ಸಾವಿರ ಬೈಕ್ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಮಂಡ್ಯಕ್ಕೆ ಒಂದು ಶಕ್ತಿ ಬಂದಿದೆ.

ಪ್ರಬಲವಾಗಿ ಬಂದಾಗ ಈ ರೀತಿಯಾಗಿ ಅಪಪ್ರಚಾರ ಬರ್ತಿದೆ ಅಷ್ಟೆ. ನೋಡೋಣ ಯಾರು ಈ ರೀತಿ ಮಾಡಿದ್ದಾರೆ ಅಂತ. ಕಾಂಗ್ರೆಸ್ ಅಥವಾ ಜೆಡಿಎಸ್​ನವರಾ ಅಂತ. ನಮ್ಮ ಕಾರ್ಯಕರ್ತರನ್ನು ಜೊತೆಯಾಗಿ ಕರೆದೊಯ್ಯುವ ಕೆಲಸ ಮಾಡ್ತೇನೆ. ಬಹಳಷ್ಟು ಬದಲಾವಣೆ ತರ್ತೇನೆ. ಇದುವರೆಗೂ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ಬಂದಿರುವುದಕ್ಕೆ ಕೆಲವರಿಗೆ ಭಯ ಹುಟ್ಟಿದೆ. ಬೇರೆ ಪಕ್ಷದವರು ಎತ್ತಿ ಕಟ್ಟುತ್ತಿದ್ದಾರೆ. ನಮ್ಮ ಪಕ್ಷದವರು ಯಾರು ಈ ರೀತಿ ಮಾಡಲ್ಲ. ನನ್ನ ಮೇಲೆ ಷಡ್ಯಂತ್ರ ರೂಪಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಹೇಳಿದರು.

ಒಟ್ಟಾರೆ ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಕಮಲ ನಾಯಕರು ಮಂಡ್ಯವನ್ನೇ ಕೇಂದ್ರ ಸ್ಥಾನ ಮಾಡ್ಕೊಂಡು ಚುನಾವಣಾ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಇದರ ನಡುವೆಯೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ದಿಢೀರ್ ಬದಲಾವಣೆ ಪಕ್ಷ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜಿಲ್ಲೆಯಲ್ಲಿ ಎದ್ದಿರೋ ಬಂಡಾಯವನ್ನು ಶಮನ ಮಾಡ್ತಾರಾ? ಅಥವಾ ಜಿಲ್ಲಾ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಅಶೋಕ್ ಅವರನ್ನೇ ಬದಲಾವಣೆ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಆರ್ ಅಶೋಕ್ ಹೆಗಲಿಗೆ

Last Updated : Jan 26, 2023, 7:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.