ETV Bharat / state

ಗಂಗಾವತಿ: ಮದುವೆ ಮನೆಯಲ್ಲಿ ಕಳ್ಳತನ ಯತ್ನ, ಇಬ್ಬರ ಬಂಧನ - theft in marrige house in gangavati

ಮದುವೆ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಮನೆಯವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

two arrested for theft
ಮದುವೆ ಮನೆಯಲ್ಲಿ ಕಳ್ಳತನಕ್ಕೆ ಯತ್ನಸಿದ ಇಬ್ಬರ ಬಂಧನ
author img

By

Published : Jul 6, 2022, 10:24 AM IST

ಗಂಗಾವತಿ: ಮದುವೆ ಮನೆಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ ಇಬ್ಬರು ಕಳ್ಳರನ್ನು ಮನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಲೂಕಿನ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಶಿಕ್ಷಕ ಹನುಮಂತಯ್ಯ ಶೆಟ್ಟಿ ಗುಮಗೇರಿ ಎಂಬುವವರ ಪುತ್ರಿಯ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು. ಮಂಗಳವಾರ ಸಂಜೆ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿರುವುದನ್ನು ಗಮನಿಸಿದ ಕಳ್ಳರು, ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಮನೆಗೆ ಲಗ್ಗೆ ಹಾಕಿದ್ದಾರೆ.

ತಕ್ಷಣ ಜಾಗೃತರಾದ ಮದುವೆ ಮನೆಯಲ್ಲಿದ್ದ ಯುವಕರು ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರ ಪೈಕಿ ಒಬ್ಬ ವಾದ್ಯಮೇಳದವರೊಂದಿಗೆ ಆಗಮಿಸಿದ್ದು, ಮತ್ತೊಬ್ಬ ಸಿಂಗನಾಳ ಗ್ರಾಮದವನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕಾಳು ಮೆಣಸಿಗೆ ಕಣ್ಣು ಹಾಕಿದ ಕಳ್ಳರು.. ಕದ್ದ ಮಾಲಿನೊಂದಿಗೆ ಆರೋಪಿಗಳು ಪೊಲೀಸರ ಬಲೆಗೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.