ಗಂಗಾವತಿ: ಹನುಮನ ಜನ್ಮಸ್ಥಾನ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಬಗ್ಗೆ ಇದೀಗ ಮತ್ತೊಂದು ಧಾರ್ಮಿಕ ಸಂಸ್ಥೆ ತಿರುಪತಿ ತಿರುಮಲ ದೇವಸ್ಥಾನ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.
ಟಿಡಿಡಿಯ ಈ ಆಕ್ಷೇಪಕ್ಕೆ ಇದೀಗ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಪ್ರತಿಕ್ರಿಯೆ ನೀಡಿದ್ದು, ರಾಮಾಯಣದಲ್ಲಿ ಬರುವ ಕಿಷ್ಕಿಂದೆಯು ಗಂಗಾವತಿ ತಾಲ್ಲೂಕಿನದ್ದೇ ಎನ್ನಲು ಸಾಕಷ್ಟು ಪುರಾವೆಗಳಿವೆ. ಆದರೆ ಟಿಟಿಡಿ ಆಕ್ಷೇಪಕ್ಕೆ ಸ್ಪಷ್ಟ ಕಾರಣಗಳೇನು ಎಂಬುವುದು ಬಹಿರಂಗಪಡಿಸಿಲ್ಲ ಎಂದಿದ್ದಾರೆ.
ಅಂಜನಾದ್ರಿ ದೇಗುಲದ ಧಾರ್ಮಿಕ ಚಟುವಟಿಕೆಗಳನ್ನು ಕಳೆದ ಒಂದೂವರೆ ಶತಮಾನದಿಂದ ನಿರ್ವಹಿಸಿಕೊಂಡು ಬಂದಿರುವ ಉತ್ತರ ಭಾರತದ ರಮಾನಂದ ಧಾರ್ಮಿಕ ಪರಂಪರೆಯ ಅರ್ಚಕ, ವಿದ್ಯಾದಾಸ ಬಾಬಾ ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ಷಾಂತರ ವರ್ಷಗಳ ಹಿಂದೆಯೇ ಈ ಭಾಗ ರೂಪುಗೊಂಡಿದೆ. ರಾಮಾಯಣದಲ್ಲಿನ ಕಥಾ ಪ್ರಸಂಗ, ಹನುಮನ ಜನ್ಮ ಸ್ಥಾನ ಇದೇ ಕಿಷ್ಕಿಂದೆ ಎಂದು ಎಲ್ಲಾ ಕಡೆ ದಾಖಲೆಗಳಿವೆ. ಆದರೆ ಟಿಟಿಡಿ ಯಾಕೆ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದೆಯೋ ಗೊತ್ತಿಲ್ಲ ಎಂದಿದ್ದಾರೆ.