ETV Bharat / state

ಮಾತು ಬರಲ್ಲ, ಕಿವಿ ಕೇಳಿಸಲ್ಲ... ಬೆರಗಾಗಿಸುತ್ತೆ ದಿವ್ಯಾಂಗರ ಕ್ರಿಕೆಟ್‌ ಆಟದ ಮೋಡಿ - undefined

ಇವರಿಗೆ ಮಾತು ಬರಲ್ಲ.. ಕಿವಿಯೂ ಕೇಳಿಸಲ್ಲ.. ಹಾಗಿದ್ರೂ, ತಾವೇನು ಕಮ್ಮಿ ಅಂತ ಟೀಂ ಕಟ್ಟಿಕೊಂಡು ಕ್ರಿಕೆಟ್ ಆಡಬಲ್ಲರು. ಕೊಪ್ಪಳದಲ್ಲಿ ದಿವ್ಯಾಂಗರೇ ಆಯೋಜಿಸಿದ್ದ ಕ್ರಿಕೆಟ್‌ ಟೂರ್ನಿ ಎಲ್ಲರ ಗಮನ ಸೆಳೆಯಿತು.

ಕ್ರಿಕೆಟ್‌ ಟೂರ್ನಿಯಲ್ಲಿ ದಿವ್ಯಾಂಗರು
author img

By

Published : Apr 28, 2019, 11:19 PM IST

ಕೊಪ್ಪಳ: ಅವರಿಗೆ ಮಾತು ಬರೋದಿಲ್ಲ, ಕಿವಿಯೂ ಕೇಳಿಸೋದಿಲ್ಲ. ಹಾಗಂತ ಕೈಲಾಗದು ಎಂದು ಕೈಕಟ್ಟಿ ಕುಳಿತಿಲ್ಲ. ತಾವು ಯಾರಿಗೇನು ಕಮ್ಮಿ ಅಂತ ಒಟ್ಟಾಗಿ ಸೇರಿ ಟೀಂ ಕಟ್ಟಿಕೊಂಡು ಅದ್ಭುತವಾಗಿ ಕ್ರಿಕೆಟ್ ಆಡ್ತಾರೆ. ಕೊಪ್ಪಳದಲ್ಲಿ ದಿವ್ಯಾಂಗರೇ ಆಯೋಜಿಸಿದ್ದ ಕ್ರಿಕೆಟ್‌ ಟೂರ್ನಿಯ ಸ್ಪೆಷಲ್ ರಿಪೋರ್ಟ್‌ ಇಲ್ಲಿದೆ ನೋಡಿ...

ಹೌದು, ಇವರು ಯಾವುದೋ ಶ್ರೀಮಂತ ಕ್ರಿಕೆಟ್‌ ಕ್ಲಬ್‌ಗಳ ಸದಸ್ಯರಲ್ಲ. ಪರಿಶ್ರಮದಿಂದ ಪ್ರತಿಭೆಯನ್ನು ಒಲಿಸಿಕೊಂಡು ಪ್ರದರ್ಶಿಸುತ್ತಿರುವ ಪ್ರಚಂಡರು. ಅಂದಹಾಗೆ ಇವರಿಗೆ ಮಾತು ಬರಲ್ಲ.. ಕಿವಿಯೂ ಕೇಳಿಸಲ್ಲ.. ಹಾಗಿದ್ರೂ, ತಾವೇನು ಕಮ್ಮಿ ಅಂತ ಸಾಮಾನ್ಯರಂತೆಯೇ ಟೀಂ ಕಟ್ಟಿಕೊಂಡು ಕ್ರಿಕೆಟ್ ಆಡಬಲ್ಲರು.

ವಾಟ್ಸ್ಯಾಪ್​ ಗ್ರೂಪ್ ಮೂಲಕ ತಮ್ಮಂಥ ಇತರರನ್ನು ಸಂಪರ್ಕಿಸಿ ಎಲ್ಲರೂ ಪರಸ್ಪರ ಸಹಕಾರ ಮನೋಭಾವದಿಂದ ಈ ಟೂರ್ನಿ ಆಯೋಜಿಸಿದ್ದಾರೆ. ಈ ಟೂರ್ನಿಯಲ್ಲಿ ಕೊಪ್ಪಳ, ಬಳ್ಳಾರಿ, ಹಾಸನ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಒಟ್ಟು ಐದು ತಂಡಗಳು ಪಾಲ್ಗೊಂಡಿದ್ದವು. ಈ ಪಂದ್ಯಗಳಲ್ಲಿ ಆಟ ಆಡುವವರು ಹಾಗೂ ಅವರನ್ನು ಪ್ರೋತ್ಸಾಹಿಸಲು ಬಂದಿದ್ದವರೆಲ್ಲರೂ ಅವರದೇ ಸಮುದಾಯದವರು ಅನ್ನೋದು ವಿಶೇಷ.

ಕ್ರಿಕೆಟ್‌ ಟೂರ್ನಿಯಲ್ಲಿ ದಿವ್ಯಾಂಗರು

ಮಾತು ಬರುವ ಒಂದಿಬ್ಬರು ಅಂಪೈರ್‌ಗಳನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಮಾತು ಬಾರದವರು ಹಾಗೂ ಕಿವಿ ಕೇಳಿಸದವರಾಗಿದ್ದರು. ಇನ್ನು ಭಾಗವಹಿಸಿದ್ದ 5 ತಂಡಗಳೂ ಸಹ ಸಖತ್ ಆಗಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.

ಟೂರ್ನಿಯಲ್ಲಿ ಅಂತಿಮವಾಗಿ ಗೆಲುವು ಸಾಧಿಸುವ ತಂಡಕ್ಕೆ ನಗದು ಬಹುಮಾನ ಘೋಷಿಸಲಾಗಿತ್ತು. ತಮ್ಮದೇ ಆದ ಸಂವಹನ ಭಾಷೆ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ದೇಹದ ವಿಕಲಾಂಗತೆ ಬದುಕುವ ಚೈತನ್ಯವನ್ನು ಮಾತ್ರ ಕುಗ್ಗಿಸಿಲ್ಲ ಎಂಬುದನ್ನು ಕ್ರೀಡೆಯ ಮೂಲಕ ತೋರಿಸಿದ್ದಾರೆ. ಇವರ ಜೀವನೋತ್ಸಾಹಕ್ಕೆ ನಮ್ಮದೊಂದು ಸಲಾಂ.

Intro:Body:

ಕೊಪ್ಪಳ: ಅವರಿಗೆ ಮಾತು ಬರೋದಿಲ್ಲ, ಕಿವಿಯೂ ಕೇಳಿಸೋದಿಲ್ಲ. ಹಾಗಂತ ಕೈಲಾಗದು ಎಂದು ಕೈಕಟ್ಟಿ ಕೂತಿಲ್ಲ. ತಾವು ಯಾರಿಗೇನು ಕಡಿಮೆ ಅಂತ ಒಟ್ಟಾಗಿ ಸೇರಿ ಟೀಂ ಕಟ್ಟಿಕೊಂಡು ಅದ್ಭುತವಾಗಿ ಕ್ರಿಕೆಟ್ ಆಡ್ತಾರೆ. ಕೊಪ್ಪಳದಲ್ಲಿ ದಿವ್ಯಾಂಗರೇ ಆಯೋಜಿಸಿದ್ದ ಕ್ರಿಕೆಟ್‌ ಟೂರ್ನಿಯ ಸ್ಪೆಷಲ್ ರಿಪೋರ್ಟ್‌ ಇಲ್ಲಿದೆ ನೋಡಿ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.