ETV Bharat / state

ರೈಲ್ವೆ ಗೇಟ್​ಗಳಿಗೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಸ್ತು: ಸಂಗಣ್ಣ ಕರಡಿ

ಕೊಪ್ಪಳ ಜಿಲ್ಲೆಯಲ್ಲಿನ ಬಹುತೇಕ ಎಲ್ಲಾ ರೈಲ್ವೆ ಗೇಟ್​ಗಳಿಗೆ ಸೇತುವೆ ನಿರ್ಮಿಸುವ ಮೂಲಕ ಉತ್ತಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಭರವಸೆ ನೀಡಿದ್ದಾರೆ.

Sanganna karadi
ಸಂಗಣ್ಣ ಕರಡಿ
author img

By

Published : Aug 27, 2021, 12:56 PM IST

ಕೊಪ್ಪಳ‌: ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ರೈಲ್ವೆ ಗೇಟ್​ಗಳಿಗೆ ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಗದಗ ಹಾಗೂ ಹೊಸಪೇಟೆ ಮಧ್ಯದಲ್ಲಿ ಸುಮಾರು 65 ಕಿಲೋ ಮೀಟರ್ ಉದ್ದದ ರೈಲ್ವೆ ಹಳಿ ಇದೆ. ಇದರಲ್ಲಿ ಬಹುತೇಕ ಕಡೆ ರೈಲ್ವೆ ಗೇಟ್​ಗಳಿದ್ದವು. ಈ ಹಳಿಯ ಮೂಲಕ ಅನೇಕ ಗೂಡ್ಸ್ ರೈಲುಗಳು, ಪ್ರಯಾಣಿಕರ ರೈಲುಗಳು ಸಂಚರಿಸುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಗೂಡ್ಸ್ ರೈಲುಗಳು ಓಡಾಡುವುದರಿಂದ ಗಂಟೆಗೊಮ್ಮೆ ರೈಲ್ವೆ ಗೇಟ್ ಹಾಕಲಾಗುತ್ತದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಈ ಹಿನ್ನೆಲೆ ಸೇತುವೆ ನಿರ್ಮಾಣ ಮಾಡಲಾಗುವುದು ಎಂದರು.

ರೈಲ್ವೆ ಗೇಟ್​ಗಳಿಗೆ ಸೇತುವೆ ನಿರ್ಮಾಣದ ಕುರಿತು ಪ್ರತಿಕ್ರಿಯೆ ನೀಡಿದ ಸಂಗಣ್ಣ ಕರಡಿ

ಜಿಲ್ಲೆಯಲ್ಲಿ ರೈಲ್ವೆ ಗೇಟ್ ನಂಬರ್ 51 ರಿಂದ 78ರ ವರೆಗೆ ರಸ್ತೆಗಳು ರೈಲ್ವೆ ಹಳಿಗಳನ್ನು ದಾಟಿಕೊಂಡು ಹೋಗುತ್ತದೆ. ಆ ಪೈಕಿ ಜಿಲ್ಲಾ ಕೇಂದ್ರ ಕೊಪ್ಪಳ ನಗರದಿಂದ ಭಾಗ್ಯನಗರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಗೇಟ್​ಗೆ ಈಗಾಗಲೇ 20.32 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ, ಕಿನ್ನಾಳ ರಸ್ತೆಯಲ್ಲಿನ ರೈಲ್ವೆ ಗೇಟ್​ಗೆ 6.70 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿದೆ. ಇನ್ನುಳಿದಂತೆ ಜಿಲ್ಲೆಯ ಭಾನಾಪುರ ಕುಕನೂರು ಮಧ್ಯದ ರೈಲ್ವೆ ಗೇಟ್​ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 59.33 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಕೊಪ್ಪಳ ನಗರದ ಹಳೆ ಓಜನಹಳ್ಳಿ ರಸ್ತೆಯಲ್ಲಿನ ರೈಲ್ವೆ ಗೇಟ್​ಗೆ 4.10 ಹಾಗೂ ಕೆಇಬಿ ಬಳಿ 4 ಕೋಟಿ ರೂ. ವೆಚ್ಚದಲ್ಲಿ ಸೇತುವೆಗಳ ಕಾಮಗಾರಿ ಆರಂಭವಾಗಲಿದೆ ಎಂದರು.

ಇದರ ಜೊತೆಗೆ ಕುಷ್ಟಗಿ ರಸ್ತೆಯಲ್ಲಿನ ರೈಲ್ವೆ ಗೇಟ್​ಗೆ 23.65 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ, ಗಿಣಗೇರಿ ಬಳಿಯ ರೈಲ್ವೆ ಗೇಟ್​ಗೆ 25.86 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗಿದೆ. ಹುಲಿಗಿ ಗ್ರಾಮದಲ್ಲಿನ ರೈಲ್ವೆ ಗೇಟ್​ಗೆ 29.63 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆಗೆ ಭೂಸ್ವಾಧೀನ ಕಾರ್ಯ ನಡೆದಿದೆ. ಅದರಂತೆ ಕಿಡದಾಳ ಗೇಟ್​ಗೆ 34 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಇನ್ನು ಟೆಂಡರ್ ಆಗಿರುವ ಕಾಮಗಾರಿಗಳನ್ನು ನಿಗಿದಿತ ಸಮಯಕ್ಕೆ ಪೂರ್ಣಗೊಳಿಸಬೇಕು ಹಾಗೂ ಸರ್ಕಾರದಿಂದ ಮಂಜೂರಾಗಬೇಕಾದ ರೈಲ್ವೆ ಗೇಟ್​ಗಳಿಗೆ ಸೇತುವೆಗಳನ್ನು ನಿರ್ಮಿಸಬೇಕಾಗಿದೆ. ಕೊಪ್ಪಳ ಜಿಲ್ಲೆಯಲ್ಲಿನ ಬಹುತೇಕ ಎಲ್ಲಾ ರೈಲ್ವೆ ಗೇಟ್​ಗಳಿಗೆ ಸೇತುವೆಗಳಾಗುತ್ತವೆ ಎಂದು ಸಂಗಣ್ಣ ಕರಡಿ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.