ಕೊಪ್ಪಳ: ಜಿಲ್ಲೆಯ ಆನೆಗುಂದಿ ಬಳಿಯ ಶ್ರೀ ವ್ಯಾಸರಾಜ ತೀರ್ಥರ ವೃಂದಾವನದ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ನಿಧಿಯಾಸೆ ಹಿನ್ನೆಲೆ ದುಷ್ಕರ್ಮಿಗಳು ವ್ಯಾಸರಾಜ ತೀರ್ಥರ ವೃಂದಾವನ ಧ್ವಂಸಗೊಳಿಸಿದ್ದರು. ಈ ಕಾರಣದಿಂದ ಸೋಸಲೆಮಠ, ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠ ಹಾಗೂ ಪೇಜಾವರ ಮಠದ ಶ್ರೀಗಳು ನವವೃಂದಾವನಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಧ್ವಂಸಗೊಂಡಿದ್ದ ವೃಂದಾವನದ ಪುನರ್ ನಿರ್ಮಾಣದ ಕಾರ್ಯ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಮನೋಹರ ತೀರ್ಥರ ನೇತೃತ್ವದಲ್ಲಿ ಮಾಡಲಾಗುತ್ತಿದೆ.