ಕೊಪ್ಪಳ : ಕೊರೊನಾ ಭೀತಿಯ ಕಾರಣ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಬಿಸಿಯೂಟದ ಬದಲಿಗೆ ಅಕ್ಕಿ, ಬೇಳೆಕಾಳು ನೀಡಲಾಗುತ್ತಿದೆ.
ನಗರದ ಸಿಪಿಎಸ್ ಶಾಲೆಯಲ್ಲಿ ಮಾರ್ಚ್ 21 ಏಪ್ರಿಲ್ 14 ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ, 1 ರಿಂದ 5 ನೇ ತರಗತಿಯವರೆಗೆ ದಿನಕ್ಕೆ 100 ಗ್ರಾಂ ಅಕ್ಕಿ, 50 ಗ್ರಾಂ ಬೇಳೆ ಮತ್ತು 6 ರಿಂದ 8 ನೇ ತರಗತಿಯವರಿಗೆ ದಿನಕ್ಕೆ 150 ಗ್ರಾಂ ಅಕ್ಕಿ, 75 ಗ್ರಾಂ ಬೇಳೆ ವಿತರಿಸಲಾಗುತ್ತಿದೆ.
ಸಿಪಿಎಸ್ ಶಾಲೆಯಲ್ಲಿ 381 ವಿದ್ಯಾರ್ಥಿಗಳಿಗೆ ಅಕ್ಕಿ, ಬೇಳೆ ವಿತರಿಸಲಾಗುತ್ತಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಅಕ್ಕಿ, ಬೇಳೆ ಪಡೆಯಲು ಬಂದ ಪಾಲಕರಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.