ಗಂಗಾವತಿ: ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸಿಎಂ ಪರಿಹಾರ ನಿಧಿಗೆ 25 ಸಾವಿರ ರೂಪಾಯಿ ಪರಿಹಾರ ಚೆಕ್ ಅನ್ನು ಸಂಘದ ಅಧ್ಯಕ್ಷ ಅಮರೇಶ ಮೈಲಾಪುರ ಶಾಸಕ ಪರಣ್ಣ ಮುನವಳ್ಳಿ ಮೂಲಕ ಸರ್ಕಾರಕ್ಕೆ ನೀಡಿದರು.
ಕೊರೊನಾ ಸೋಂಕಿನ ಭೀತಿಯಿಂದಾಗಿ ಇಡೀ ದೇಶ ಲಾಕ್ಡೌನ್ ಆಗಿದ್ದು, ತುರ್ತು ಪರಿಹಾರ ಮತ್ತು ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶಕ್ಕೆ ಸಂಘದಿಂದ ಹಣ ನೀಡಲಾಗುತ್ತಿದೆ. ಅನೇಕ ಬಡ ಜನರು, ನಿರ್ಗತಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಸರ್ಕಾರ ಅವರಿಗೆ ಶೀಘ್ರವೇ ನೆರವಿಗೆ ಧಾವಿಸಲಿ ಎಂದು ಸಂಘದಿಂದ ನೆರವು ನೀಡುತ್ತಿದ್ದೇವೆ ಎಂದರು.
ಪದಾಧಿಕಾರಿಗಳಾದ ಛಾಯಪ್ಪ, ಶರಣಪ್ಪ ಹಕ್ಕಂಡಿ, ಹಂಪನಗೌಡ ಇದ್ದರು.