ಕೊಪ್ಪಳ: ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ಮುನಿರಾಬಾದ್ನಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್ ಹಾಗೂ ಕೆಎಸ್ಆರ್ಪಿಯಿಂದ ಮ್ಯಾರಥಾನ್ ನಡೆಯಿತು. ಮ್ಯಾರಥಾನ್ಗೆ ಎಡಿಜಿಪಿ ಅಲೋಕ್ ಕುಮಾರ್ ಚಾಲನೆ ನೀಡಿದರು.
![Marathon](https://etvbharatimages.akamaized.net/etvbharat/prod-images/kn-kpl-03-03-alokakumar-maatu-visuals-7202284_03112020113728_0311f_00958_149.jpg)
ಕೆಎಸ್ಆರ್ಪಿ ಕ್ಯಾಂಪಸ್ನಿಂದ ಆರಂಭವಾದ ಸುಮಾರು 6.7 ಕಿಮೀ ಮ್ಯಾರಾಥಾನ್, ತುಂಗಭದ್ರಾ ಜಲಾಶಯದ ಬಳಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಎಸ್ಆರ್ಪಿ ಸಿಬ್ಬಂದಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
![Marathon](https://etvbharatimages.akamaized.net/etvbharat/prod-images/kn-kpl-01-03-marathon-visuals-7202284_03112020092638_0311f_00489_105.jpg)
ಈಗಾಗಲೇ ಕೊರೊನಾ ಜನರನ್ನು ವಿಪರೀತವಾಗಿ ಬಾಧಿಸಿದೆ. ಮಧುಮೇಹ, ಬಿಪಿ ಸೇರಿದಂತೆ ಅನೇಕ ಕಾಯಿಲೆಗಳನ್ನು ಹೊಂದಿರುವ ಜನರಿಗೆ ಕೊರೊನಾ ಅಂಟಿಕೊಂಡು ಬಲಿ ತೆಗೆದುಕೊಂಡಿತು. ಹೀಗಾಗಿ, ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಹೆಚ್ಚು ಅವಶ್ಯಕ ಎಂದು ಹೇಳಿದರು.