ಕುಷ್ಟಗಿ (ಕೊಪ್ಪಳ): ಕಾಂಗ್ರೆಸ್ ಸದ್ಯ ಕೋಮಾ ಪರಿಸ್ಥಿತಿಯಲ್ಲಿದೆ, ಗ್ರಾಪಂ ಚುನಾವಣೆ ಸಮೀಪಿಸಿದರೂ ಕಾಂಗ್ರೆಸ್ಸಿನವರು ಇನ್ನೂ ಎದ್ದಿಲ್ಲ, ಇನ್ಮುಂದೆಯೂ ಎದ್ದೇಳಲು ಸಾದ್ಯವೇ ಇಲ್ಲ ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃಧ್ಧಿ ಪ್ರಾಧೀಕಾರ (ಕಾಡಾ) ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಹೇಳಿದರು.
ತಾಲೂಕಾ ಬಿಜೆಪಿ ಮಂಡಲ ನೇತೃತ್ವದಲ್ಲಿ ನಡೆದ ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಹೆಚ್ಚಿನ ಅನುದಾನ ಕೇಳುವ ಅವಕಾಶವೂ ಸಿಗಲಿದೆ. ಹೊರತು ಕಾಂಗ್ರೆಸ್ಸಿನವರಲ್ಲಿ ಏನಿದೆ? ಕಾಂಗ್ರೆಸ್ಸಿಗೆ ವೋಟು ಹಾಕಿದರೆ ಏನು ಲಾಭ? ಕಾಂಗ್ರೆಸ್ ಬಗ್ಗೆ ಬೈಯ್ಯಬೇಡಿ. ಈಗಾಗಲೇ ಕಾಂಗ್ರೆಸ್ ಕೋಮಾದಲ್ಲಿದೆ, ಕುಷ್ಟಗಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಈ ಸಲ ಗೆದ್ದಿದ್ದಾರೆ. ಮುಂದಿನ ಸಲ ಅದು ಸಾಧ್ಯವಿಲ್ಲ ಎಂದರು.
ಓದಿ:ಬಿಳಿಜೋಳಕ್ಕೂ ಲಗ್ಗೆ ಇಟ್ಟ'ಹುಸಿ ಸೈನಿಕ ಹುಳು'.. ಬೆಳೆಗಾರರು ಕಂಗಾಲು
ಈ ಬಾರಿ 36 ಗ್ರಾಪಂಗಳಲ್ಲಿ ಬಹುಪಾಲು ಬಿಜೆಪಿ ಸ್ವಾಭಿಮಾನದ ಪ್ರಶ್ನೆ. ಬಿಜೆಪಿ ಬೆಂಬಲಿತ ಗ್ರಾಪಂ ನೂತನ ಸದಸ್ಯರು ಡಿ.30 ರಂದು ವಿಜಯೋತ್ಸವ ಆಚರಿಸೋಣ ಎಂದರು. ಗ್ರಾಮದಲ್ಲಿರುವ ಸಂಪತ್ತು ಕಲ್ಲು, ಮಣ್ಣು ನಿಕ್ಷೇಪ ಚೀನಾ ದೇಶಕ್ಕೆ ಹೋಗುತ್ತಿದೆ. ಆ ಸಂಪತ್ತು ಗ್ರಾಪಂಗೆ ಒಳಪಡಬೇಕು.
ಆ ಸಂಪತ್ತು ಇಲ್ಲಿನ ಜನತೆ ಬದುಕು ಕಟ್ಟಿಕೊಳ್ಳುವಂತಾಗುವ ಕಾನೂನು ತರಲು ಪ್ರಯತ್ನಿಸುತ್ತೇವೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಪಂ ಸಬಲೀಕರಣಕ್ಕಾಗಿ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಲಿದ್ದು. ಚುನಾವಣೆ ನಂತರ ಹಲವು ಯೋಜನೆಗಳು ಗ್ರಾಮಗಳಿಗೆ ಮೀಸಲಿಡಲಿದ್ದಾರೆ ಎಂದರು.