ಗಂಗಾವತಿ: ತಾಲೂಕಿನ ಧಾರ್ಮಿಕ, ಐತಿಹ್ಯ ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡರೆ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತವೆ ಎಂಬ ಮಾತು ಜನಿಜನಿತವಾಗಿದೆ. ಅದು ನಿಜವೋ ಸುಳ್ಳೊ ಗೊತ್ತಿಲ್ಲ. ಅದು ಭಕ್ತರ ನಂಬಿಕೆಗೆ ಬಿಟ್ಟ ವಿಷಯ.
ಆದರೆ ದೇವಾಲಯದ ನಿರ್ವಹಣೆ, ಕಂದಾಯ ಇಲಾಖೆಯ ಸುಪರ್ದಿಗೆ ಬಂದ ಬಳಿಕ ಹನುಮನ ಹುಂಡಿ ಪವಾಡದಂತೆ ತುಂಬುತ್ತಿದೆ. ತಿಂಗಳಿಗೊಮ್ಮೆ ತೆಗೆಯುತ್ತಿದ್ದ ಹುಂಡಿ ಈಗ 15 ದಿನಕ್ಕೆ ತೆಗೆದರೂ ಕಂತೆ ಕಂತೆ ಹಣ ಪತ್ತೆಯಾಗುತ್ತಿದೆ.
ದೇವಾಲಯದ ಹುಂಡಿ ತೆಗೆದಾಗ 3.32 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಈ ಹಿಂದೆ ನವಂಬರ್ 12ರಂದು ಹುಂಡಿ ತೆಗೆದಾಗ ಕೇವಲ 43 ದಿನಕ್ಕೆ 9.46 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಇಷ್ಟೊಂದು ಹಣ ಹನುಮನ ಹುಂಡಿಗೆ ಸೇರುತ್ತಿರುವುದು ಜನರಿಗೆ ಪವಾಡದಂತೆ ಭಾಸವಾಗುತ್ತಿದೆ.