ಗಂಗಾವತಿ: ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂಬ ಕಾರಣಕ್ಕೆ ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ವಠಾರ ಶಾಲೆ ಎಂಬ ವಿನೂತನ ಯೋಜನೆ ಜಾರಿ ಮಾಡಿದೆ.ಆದರೆ ಈ ಯೋಜನೆಯನ್ನು ಜಾರಿ ಮಾಡುವ ಮೊದಲೇ ಇಲ್ಲೋರ್ವ ಶಿಕ್ಷಕರು ಇದನ್ನು ಅನುಷ್ಠಾನಕ್ಕೆ ಪಾಠ ಹೇಳಿಕೊಡುತ್ತಿದ್ದ ಹಿನ್ನೆಲೆ ಅವರನ್ನು ಶಿಕ್ಷಣ ಇಲಾಖೆ ಗೌರವಿಸಿದೆ.
ಶಾಲೆಯ ಶಿಕ್ಷಕರು, ಮಕ್ಕಳ ಮನೆಗೆ ತೆರಳಿ ಪಾಠ ಮಾಡುವ ಯೋಜನೆ ಇದಾಗಿದೆ.ಆದರೆ, ಸರ್ಕಾರ ಯೋಜನೆ ಜಾರಿ ಮಾಡುವ ಮುನ್ನವೇ ತಾಲೂಕು ಮಾತ್ರವಲ್ಲ, ಇಡೀ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಠಾರ ಶಾಲೆ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದ ಶಿಕ್ಷಕ ಸೋಮುಕುದರಿಹಾಳ ಅವರನ್ನು ತಾಲೂಕಿನ ಶ್ರೀರಾಮನಗರದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳು ಇರುವಲ್ಲಿಗೆ ತೆರಳಿದ ಈ ಶಿಕ್ಷಕ, ನಾಲ್ಕಾರು ಮಕ್ಕಳನ್ನು ಒಂದುಕಡೆ ಸೇರಿಸಿ ಪಾಠ ಮಾಡುವ ಮೂಲಕ ವಠಾರ ಶಾಲೆಯ ಪರಿಕಲ್ಪನೆಯನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ಈ ಹಿನ್ನೆಲೆ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಪ್ರೇಮಿಗಳು ಶಿಕ್ಷಕನನ್ನು ಸನ್ಮಾನಿಸಿ ಗೌರವಿಸಿವೆ.