ETV Bharat / state

ನಾಪತ್ತೆಯಾದ ಸುಧಾ ಪತಿ ಮತ್ತು ಮಗುವಿನೊಂದಿಗೆ ದಿಢೀರ್ ಪ್ರತ್ಯಕ್ಷ: ನಗರಸಭೆ ಸದಸ್ಯೆ ಹೇಳಿದ್ದೇನು? - ಗಂಗಾವತಿ ಇತ್ತೀಚಿನ ಕಿಡ್ನಾಪ್​ ಸುದ್ದಿ

ಕಾಂಗ್ರೆಸ್ ಪಕ್ಷದ ನಾಯಕರು ಹೈಜಾಕ್ ಮಾಡಿದ್ದಾರೆ ಎಂದು ಈ ಹಿಂದೆ ಆರೋಪಿಸಲಾದ ಗಂಗಾವತಿಯ 26ನೇ ವಾರ್ಡ್​ನ ಬಿಜೆಪಿ ಬೆಂಬಲಿತ ಸದಸ್ಯೆ ಸುಧಾ, ತನ್ನ ಪತಿ ಹಾಗೂ ಮಗುವಿನೊಂದಿಗೆ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.

ನಾಪತ್ತೆಯಾದ ಸುಧಾ ದಿಢೀರ್ ಪ್ರತ್ಯಕ್ಷ
ನಾಪತ್ತೆಯಾದ ಸುಧಾ ದಿಢೀರ್ ಪ್ರತ್ಯಕ್ಷ
author img

By

Published : Oct 25, 2020, 1:50 PM IST

ಗಂಗಾವತಿ: ಕಾಂಗ್ರೆಸ್ ಪಕ್ಷದ ನಾಯಕರು ಹೈಜಾಕ್ ಮಾಡಿದ್ದಾರೆ ಎನ್ನಲಾದ 26ನೇ ವಾರ್ಡ್​ನ ಬಿಜೆಪಿ ಬೆಂಬಲಿತ ಸದಸ್ಯೆ ಸುಧಾ, ತನ್ನ ಪತಿ ಹಾಗೂ ಮಗುವಿನೊಂದಿಗೆ ದಿಢೀರ್ ಕಾಣಿಸಿಕೊಂಡು ತಾನೆಲ್ಲಿಗೂ ಹೋಗಿಲ್ಲ. ತಮ್ಮನ್ನು ಯಾರೂ ಕಿಡ್ನಾಪ್ ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಅಜ್ಞಾತ ಸ್ಥಳದಿಂದಲೇ ವಿಡಿಯೋ ರೆಕಾರ್ಡ್​ ಮಾಡಿ ಕಳುಹಿಸಿರುವ ಸುಧಾ, ತಮ್ಮನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ಮಗು, ಪತಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದು, ನ.2ರಂದು ನೇರವಾಗಿ ಗಂಗಾವತಿ ನಗರಸಭೆಯಲ್ಲಿ ನಡೆಯುವ ಮತದಾನಕ್ಕೆ ಬಂದು ವೋಟ್ ಹಾಕುತ್ತೇವೆ ಎಂದು ಸದಸ್ಯೆಯ ಪತಿ ಸೋಮನಾಥ ತಿಳಿಸಿದ್ದಾರೆ.

ಈ ಮೂಲಕ ತಮ್ಮ ಅತ್ತೆ ಬಾಲಮ್ಮ ನಗರ ಠಾಣೆಯಲ್ಲಿ ನೀಡಿದ್ದ ಕಿಡ್ನಾಪ್ ದೂರು ಸುಳ್ಳೆಂದು ಸ್ಪಷ್ಟಪಡಿಸಿರುವ ಸುಧಾ, ನ.2ರ ಬಳಿಕ ಎಲ್ಲರ ಎದುರು ಬಂದು ನಡೆದ ಘಟನೆ ಏನೆಂದು ವಿವರಣೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.