ETV Bharat / state

ಕೊರೊನಾದಿಂದ ಬೆಲೆ ನೆಲಕಚ್ಚಿದ ಹತಾಶೆ; ಟ್ರ್ಯಾಕ್ಟರ್‌ ಹತ್ತಿಸಿ ಎರಡೂವರೆ ಎಕರೆ ಬಾಳೆ ನಾಶಗೈದ ರೈತ - ಬಾಳೆ ಬೆಳೆ ನಾಶಪಡಿಸಿದ ರೈತ

ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹತಾಶೆಯಿಂದ ರೈತರೊಬ್ಬರು ಎರಡೂವರೆ ಎಕರೆಯಲ್ಲಿ ನಳನಳಿಸುತ್ತಿದ್ದ ಬಾಳೆ ನಾಶ ಮಾಡಿದ್ದಾರೆ.

Farmer destroyed banana crop
ಫಸಲಿದ್ದ ಎರಡೂವರೆ ಎಕರೆ ಬಾಳೆ ಬೆಳೆ ನಾಶಪಡಿಸಿದ ರೈತ
author img

By

Published : Apr 15, 2021, 10:01 AM IST

ಕೊಪ್ಪಳ: ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಮನನೊಂದ ರೈತನೋರ್ವ ಫಸಲಿದ್ದ ತನ್ನ ಎರಡೂವರೆ ಎಕರೆ ಬಾಳೆ ಬೆಳೆಯನ್ನು ಟ್ರ್ಯಾಕ್ಟರ್ ಹತ್ತಿಸಿ ನಾಶ ಮಾಡಿದ್ದಾರೆ.

ಫಸಲಿದ್ದ ಎರಡೂವರೆ ಎಕರೆ ಬಾಳೆ ಬೆಳೆ ನಾಶಪಡಿಸಿದ ರೈತ

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ರೈತ ಗವಿಸಿದ್ದಪ್ಪ ಗದ್ದಿಕೇರಿ, ಎರಡು ಎಕರೆ ಪ್ರದೇಶದಲ್ಲಿದ್ದ ಬಾಳೆ ಬೆಳೆದಿದ್ದರು. ಕಳೆದ ವರ್ಷ ಕೊರೊನಾ ಸೋಂಕಿನಿಂದಾಗಿ ಉಂಟಾದ ಲಾಕ್‍ಡೌನ್‍ನಿಂದಾಗಿ ಬಾಳೆಗೆ ಉತ್ತಮ ಬೆಲೆ ಸಿಗಲಿಲ್ಲ. ಈ ಬಾರಿಯಾದರೂ ಉತ್ತಮ ಬೆಲೆ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದರು. ಆದ್ರೆ ಈ ನಿರೀಕ್ಷೆಯೂ ಹುಸಿಯಾಗಿದೆ. ಖರೀದಿದಾರರು ಒಂದು ಕೆ.ಜಿಗೆ 2 ರಿಂದ 3 ರೂಪಾಯಿಗೆ ಕೇಳುತ್ತಿದ್ದಾರೆ. ಇದರಿಂದಾಗಿ ಬಾಳೆ ಬೆಳೆಯಲು ಹಾಕಿದ ಬಂಡವಾಳವೂ ಸಹ ಬರುತ್ತಿಲ್ಲ. ಹೀಗಾಗಿ, ಬೆಳೆ ನಾಶಪಡಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಬಾಳೆ ಸೇರಿದಂತೆ ರೈತರ ವಿವಿಧ ಬೆಳೆಗಳ ಬೆಲೆಗಳೂ ಕೂಡಾ ನೆಲಕಚ್ಚಿವೆ. ಕೃಷಿ ಸಚಿವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ರೈತರ ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೊರೊನಾ ಪಜೀತಿ: ದೆಹಲಿಯ ಅತಿದೊಡ್ಡ ಸ್ಮಶಾನದಲ್ಲೂ ಅಂತ್ಯಕ್ರಿಯೆಗೆ ಜಾಗವಿಲ್ಲ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.