ಗಂಗಾವತಿ: ದೈನಂದಿನ ಅಗತ್ಯ ವಸ್ತುಗಳ ಖರೀದಿಗೆ ಜನ ಜಾತ್ರೆಯಂತೆ ಮುಗಿಬೀಳುತ್ತಿರುವುದರಿಂದ ಅಧಿಕಾರಿಗಳು ಇಲ್ಲಿನ ಸಂತೆಬೈಲ್ ಪ್ರದೇಶದಲ್ಲಿ ನಡೆಯುತ್ತಿದ್ದ ಸಗಟು ವ್ಯಾಪಾರದ ಮಾರುಕಟ್ಟೆಯನ್ನು ಮಧ್ಯರಾತ್ರಿಯೇ ಸ್ಥಳಾಂತರಿಸಿದ್ದಾರೆ.
ಘಟನೆಯ ಬಗ್ಗೆ ಈಟಿವಿ ಭಾರತ ವರದಿ ಪ್ರಕಟಿಸುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಧಿಕಾರಿ, ತಕ್ಷಣವೇ ಜಾರಿಗೆ ಬರುವಂತೆ ಸಗಟು ವ್ಯಾಪಾರವನ್ನು ನಿಗದಿತ ಸ್ಥಳದಲ್ಲಿ ರದ್ದು ಮಾಡಿದರು. ಇದಕ್ಕೆ ಪರ್ಯಾಯವಾಗಿ ಎಪಿಎಂಸಿ ಮತ್ತು ತಾಲೂಕು ಕ್ರೀಡಾಂಗಣದಲ್ಲಿ ಮಾರುಕಟ್ಟೆಗೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದು, ಮಧ್ಯರಾತ್ರಿಯಲ್ಲಿಯೇ ಮಾರುಕಟ್ಟೆಯನ್ನು ಸ್ಥಳಾಂತರಿಸಿದರು.
ಇನ್ನು ವ್ಯಾಪಾರಿಗಳು ಹಾಗೂ ಜನ ಮಧ್ಯರಾತ್ರಿಯಲ್ಲೂ ನೂರಾರು ಸಂಖ್ಯೆಯಲ್ಲಿ ಸೇರಿದ್ದರು.