ಗಂಗಾವತಿ: ಕರ್ನಾಟಕದ ಭತ್ತದ ಕಣಜ ಗಂಗಾವತಿಯಲ್ಲಿ ಈಟಿವಿ ಭಾರತದ ಸುದ್ದಿ ಸದ್ದು ಮಾಡಿದೆ. ಪೌರ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡಿರುವ ಈಟಿವಿ ಭಾರತ ವರದಿಯಿಂದ ಜಿಲ್ಲಾಧಿಕಾರಿ ಎಚ್ಚೆತ್ತಕೊಂಡಿದ್ದಾರೆ.
ಅಮೃತ್ ಸಿಟಿ ಯೋಜನೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರ್ಮಿಕರನ್ನು ಯಾವುದೇ ರಕ್ಷಣಾ ಸಲಕರಣೆ ಇಲ್ಲದೇ ಚರಂಡಿಗೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಆಯುಕ್ತರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಸುನೀಲ್ ಕುಮಾರ್, ಕೂಲಿಕಾರ್ಮಿಕರನ್ನು ನೇರವಾಗಿ ಚರಂಡಿಗೆ ಇಳಿಸಿದ್ದರ ಬಗ್ಗೆ ಕಾರಣ ಕೇಳಿ ನಗರಸಭೆಯ ಪೌರಾಯುಕ್ತ ಎಸ್.ಎಫ್. ಈಳಿಗೇರ ಅವರಿಗೆ ನೋಟಿಸ್ ನೀಡಿದ್ದಾರೆ.
![notice](https://etvbharatimages.akamaized.net/etvbharat/prod-images/5428050_notice.jpg)
ನೊಟೀಸ್ನಲ್ಲಿ ಈಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಹೀಗಾಗಿ ಯಾವುದೇ ಕಾರ್ಮಿಕರನ್ನು ರಕ್ಷಣಾ ಪರಿಕರಗಳಿಲ್ಲದೇ ಚರಂಡಿ ಸ್ವಚ್ಛತೆಗೆ ಇಳಿಸಬಾರದು ಎಂದು ಸೂಚನೆ ನೀಡಿದ್ದಾರೆ.
ಚರಂಡಿಗೆ ಇಳಿದ ಕಾರ್ಮಿಕರು.. ನಗರಸಭೆಯಿಂದ ಗುತ್ತಿಗೆದಾರನಿಗೆ ನೋಟಿಸ್ ಎಚ್ಚರಿಕೆ
ಸುರಕ್ಷಾ ಸಾಧನಗಳಿಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಕಾರ್ಮಿಕರು... ಇದಕ್ಕೆ ಹೊಣೆ ಯಾರು?