ಕೊಪ್ಪಳ: ಕೊರೊನಾ ಲಾಕ್ಡೌನ್ನಿಂದ ವಾಹನ ಸೌಲಭ್ಯವಿಲ್ಲದೇ ಗರ್ಭಿಣಿಯೊಬ್ಬಳು ತಮ್ಮೂರಿನಿಂದ ನಡೆದುಕೊಂಡು ಕೊಪ್ಪಳದ ಆಸ್ಪತ್ರೆಗೆ ಬಂದಿದ್ದಾಳೆ.
ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಿಂದ ಗರ್ಭಿಣಿ ಹಾಗೂ ಆಕೆಯ ತಾಯಿ ಕೊಪ್ಪಳಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ನಗರದಿಂದ ಸುಮಾರು ಆರೇಳು ಕಿಮೀ. ದೂರದಲ್ಲಿರುವ ನರೇಗಲ್ ಗ್ರಾಮದಿಂದ ಗರ್ಭಿಣಿ ಲಕ್ಷ್ಮಿ ಹಾಗೂ ಆಕೆಯ ತಾಯಿ ಬಸಮ್ಮ ಕಾಲ್ನಡಿಗೆಯಲ್ಲಿಯೇ ಬಂದಿರುವುದಾಗಿ ತಿಳಿಸಿದ್ದಾರೆ.
ಗರ್ಭಿಯಾಗಿರುವುದರಿಂದ ನಗರದ ಮಂಗಳಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಬಂದಿದ್ದೇವೆ. ಈಗ ಬಸ್ ಇಲ್ಲ ಹಾಗೂ ಮನೆಯಲ್ಲಿ ಗಂಡಸರು ಇಲ್ಲದ ಕಾರಣ ತಾಯಿಯೊಂದಿಗೆ ಆಸ್ಪತ್ರೆಗೆ ನಡೆದುಕೊಂಡು ಬಂದಿರುವುದಾಗಿ ಗರ್ಭಿಣಿ ಲಕ್ಷ್ಮಿ ತಿಳಿಸಿದ್ದಾಳೆ.