ಗಂಗಾವತಿ: ಬಸ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ತಂದೆ ಹಾಗೂ ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಚಾಲಕ ಸಿದ್ಧನಗೌಡ ಪಾಟೀಲ್ ನಿರ್ಲಕ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೃತನ ಅಳಿಯ ನಾಗರಾಜ್ ದ್ಯಾಮಪ್ಪ ತಳವಾರ ನೀಡಿದ ದೂರಿನ ಮೇರೆಗೆ, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಸ್ತೆ ಅಪಘಾತ: ವಾಹನದ ಚಕ್ರಕ್ಕೆ ಸಿಲುಕಿ ತಂದೆ ಮಗ ಸಾವು
ಅಪಘಾತದಲ್ಲಿ ಗಂಗಾವತಿಯ ಜಯನಗರದ ಹನುಮಂತಪ್ಪ ನಾಯಕ್ (38) ಹಾಗೂ ಆತನ ಪುತ್ರ ಪ್ರವೀಣ ಕುಮಾರ (4) ಭೀಕರವಾಗಿ ಸಾವನ್ನಪ್ಪಿದ್ದರು. ಮೃತಪಟ್ಟವರು ಕಲ್ಗುಡಿ ಗ್ರಾಮದಿಂದ ಗಂಗಾವತಿಗೆ ಬರುವ ಸಂದರ್ಭದಲ್ಲಿ, ಬಸ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿತ್ತು.