ETV Bharat / state

ಅಪ್ರಾಪ್ತೆಗೆ ಚುಡಾಯಿಸಿದ ಪ್ರಕರಣ; ಜಾತಿ ಸಂಘರ್ಷ, 28 ಜನರ ವಿರುದ್ದ ಕೇಸ್

author img

By

Published : Jun 9, 2021, 2:34 PM IST

ಕುಷ್ಟಗಿ ತಾಲೂಕಿನ ಪರಮನಟ್ಟಿ ಗ್ರಾಮದಲ್ಲಿ ಅಪ್ರಾಪ್ತೆಯನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ನಡೆದ ರಾಜಿ ಪಂಚಾಯತಿ ವೇಳೆ ಎರಡು ಬಣಗಳ ಮಧ್ಯೆ ಜಾತಿ ಸಂಘರ್ಷ ನಡೆದಿದೆ.

Kushtagi
28 ಜನರ ವಿರುದ್ದ ಪ್ರಕರಣ ದಾಖಲು

ಕುಷ್ಟಗಿ (ಕೊಪ್ಪಳ): ತಾಲೂಕಿನ ಪರಮನಟ್ಟಿ ಗ್ರಾಮದಲ್ಲಿ ಅಪ್ರಾಪ್ತೆಯನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ನಡೆದ ರಾಜಿ ಪಂಚಾಯತಿ ವೇಳೆ ಎರಡು ಬಣಗಳ ಮಧ್ಯೆ ಜಾತಿ ಸಂಘರ್ಷ ನಡೆದಿದೆ. ಈ ಸಂಬಂಧ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿವೆ.

ಏನಿದು ಪ್ರಕರಣ?

ಪರಮನಟ್ಟಿ ಗ್ರಾಮದ ವಿಜಯಕುಮಾರ ನಾಯಕವಾಡಿ ಎಂಬ ಯುವಕ ಅಪ್ರಾಪ್ತೆಗೆ ಪ್ರೇಮ‌‌ ನಿವೇದನೆಯ ವಾಟ್ಸಾಪ್​ ಸಂದೇಶ ಕಳುಹಿಸುತ್ತಿದ್ದ. ಅಲ್ಲದೇ ಗ್ರಾಮದಲ್ಲಿ ಹಿಂಬಾಲಿಸಿ ಕಣ್ಸನ್ನೆ, ಕೈಸನ್ನೆ ಮಾಡುತ್ತಿದ್ದ. ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ತಬ್ಬಿಕೊಂಡು ಅಶ್ಲೀಲವಾಗಿ ವರ್ತಿಸಿದ್ದ. ಈ ಬಗ್ಗೆ ಮನೆಯವರಿಗೆ ತಿಳಿಸಿದರೆ ಕೊಂದು ಹಾಕುವುದಾಗಿ ಬೆದರಿಸಿದ್ದ ಎಂದು ಅಪ್ರಾಪ್ತೆ ಸ್ಥಳೀಯ ಠಾಣೆಗೆ ದೂರು ನೀಡಿದ್ದಳು.

ಪ್ರಕರಣ ಸಂಬಂಧ ಗ್ರಾಮದಲ್ಲಿ ರಾಜಿ ಪಂಚಾಯಿತಿ ನಡೆಸಲಾಗಿತ್ತು. ಈ ವೇಳೆ ಅಪ್ರಾಪ್ತೆ ಹಾಗೂ ಯುವಕನ ಕಡೆಯವರ ನಡುವೆ ಮಾರಾಮಾರಿಯಾಗಿದೆ. ಸದರಿ ಪ್ರಕರಣದಲ್ಲಿ ಯುವಕ ಸೇರಿದಂತೆ 28 ಜನರ ವಿರುದ್ದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಾಳೆಯಿಂದ ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಕೋವಿಡ್ ಲಸಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.