ETV Bharat / state

ಕುಷ್ಟಗಿ: ರೈತರೊಬ್ಬರ ತೋಟದಲ್ಲಿ ಭೋಜನ ಸವಿದ ವಿಜಯೇಂದ್ರ - ಸಿಂದಗಿ ಉಪಚುನಾವಣೆ

ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಿಂದಗಿಯಲ್ಲಿ ಉಪಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ, ರೈತರೊಬ್ಬರ ತೋಟದಲ್ಲಿ ಭೋಜನ ಸವಿದರು.

BJP State vice president BY Vijayendra made lunch in farmer farm
ರೈತರೊಬ್ಬರ ತೋಟದಲ್ಲಿ ಭೋಜನ ಸವಿದ ಬಿವೈ ವಿಜಯೇಂದ್ರ
author img

By

Published : Oct 23, 2021, 10:58 PM IST

ಕುಷ್ಟಗಿ(ಕೊಪ್ಪಳ): ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಾಲೂಕಿನ ಕಡೇಕೊಪ್ಪದ ತೋಟದಲ್ಲಿ ವನ ಭೋಜನ ಸವಿದು ಸರಳತೆ ಮೆರೆದರು.

ಉಪಚುನಾವಣೆಯ ಹಿನ್ನೆಲೆಯಲ್ಲಿ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಗಿಸಿ, ವಾಪಸ್​​​ ಬೆಂಗಳೂರಿಗೆ ಹೋಗುವ ವೇಳೆ ಮಧ್ಯಾಹ್ನ ತಾವು ತಂದಿದ್ದ ಊಟವನ್ನು‌ ಕಡೇಕೊಪ್ಪ ರೈತರೊಬ್ಬರ ತೋಟದಲ್ಲಿ ಸವಿದರು. ಈ ವೇಳೆ ಅಭಿಮಾನಿಯೊಬ್ಬರ ಮನೆಯಲ್ಲಿ ಮಾಡಿಸಿದ್ದ ಖಡಕ್ ರೊಟ್ಟಿ, ತರಹೇವಾರಿ ಪಲ್ಲೆ, ಮೊಸರು, ಹಕ್ಕರಕಿ ಹಸಿ ತಪ್ಪಲು ಪಲ್ಲೆಯನ್ನು ಸೇವಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳೀಕೇರಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ, ತಮ್ಮೇಶಗೌಡ, ಜವಳಿ ನಿಗಮದ ನಿರ್ದೇಶಕ ಮುತ್ತು ರಾಠೋಡ್, ನರೇಶ ಕ್ಯಾದಿಗುಪ್ಪಾ, ಗ್ರಾಮ ಪಂಚಾಯಿತಿ ಸದಸ್ಯರಾದ ಶೇಖರಪ್ಪ ಉಪ್ಪಾರ,ಬಸವರಾಜ ತಳವಾರ, ಗ್ರಾಮದ ಬಿಜೆಪಿ ಮುಖಂಡ ಬಸವರಾಜ ವಾಲಿಕಾರ, ಮಹಾಂತೇಶ ಭಾವಿಕಟ್ಟಿ. ಹನಮಗೌಡ ಎಚ್ ಗೌಡರ,ಬಾಲಪ್ಪ ಪೂಜಾರಿ,ಸಂಗಪ್ಪ ಗದ್ದಿ ಮತ್ತು ಕುರಿಗಾರರಾದ ಸಂತೋಷ ರುಳ್ಳಿ, ಭೀಮಪ್ಪ ಬುಳ್ಳಿ, ಗದ್ದೆಪ್ಪ ಬಾಚ್ಯಾಳಿ,ಗುಂಡಪ್ಪ ಜಿಗೇರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.