ಗಂಗಾವತಿ(ಕೊಪ್ಪಳ): ಪಟ್ಟಣದ ಅಕ್ಷರ ಪಬ್ಲಿಕ್ ಶಾಲೆಯ ಮಕ್ಕಳು ಹಮ್ಮಿಕೊಂಡಿದ್ದ ಬೆಸ್ಟ್ ಔಟ್ ಆಫ್ ವೇಸ್ಟ್ ಕಾರ್ಯಕ್ರಮದಲ್ಲಿ ಸುಮಾರು 800ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಇವುಗಳನ್ನು ಮಕ್ಕಳು ಮನೆ ತ್ಯಾಜ್ಯದಿಂದಲೇ ತಯಾರಿಸಿದ್ದಾರೆ.
ವಿಜ್ಞಾನ, ಗಣಿತ, ಜೀವಶಾಸ್ತ್ರ, ಭೂಗೋಳ, ಭೌತಶಾಸ್ತ್ರ, ಇತಿಹಾಸ ವಿಷಯಕ್ಕೆ ಸಂಬಂಧಿಸಿದಂತೆ ಒಂದರಿಂದ ಹತ್ತನೇ ತರಗತಿಯ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಇವುಗಳನ್ನು ಸಿದ್ಧಪಡಿಸಿದ್ದಾರೆ. ಬಳಸಿ ಬಿಸಾಡುವ ಇಯರ್ ಬಡ್ಗಳಿಂದ ಮಾನವನ ಅಸ್ತಿ ಪಂಜರ, ಪಿಸ್ತಾದ ಸಿಪ್ಪೆಯಿಂದ ಗೋಡೆ ಅಲಂಕಾರಿಕ ವಸ್ತುಗಳು, ಕೊಬ್ಬರಿ ಚಿಪ್ಪಿನಿಂದ ನಾನಾ ಮಾದರಿಯ ವಸ್ತುಗಳನ್ನು ಮಾಡಿದ್ದು, ಗಮನ ಸೆಳೆದವು.
ಶಾಲೆಯಲ್ಲಿ ವಾರಕ್ಕೆರಡು ದಿನ ನಾನಾ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುತ್ತೇವೆ. ಅಲ್ಲದೇ ತಿಂಗಳಿಗೆ 16 ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಮಾಡುವ ಮೂಲಕ ಅವರಲ್ಲಿನ ಸೃಜನಾತ್ಮಕ ಚಟುವಟಿಕೆ ಬೆಳೆಯಲು ಪ್ರೇರೇಪಿಸುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥ ರವಿಚೈತನ್ಯ ರೆಡ್ಡಿ ಹೇಳಿದರು.
ಇದನ್ನೂ ಓದಿ: ರೈತರ ಸಂಕಷ್ಟ ಗೊತ್ತಿಲ್ಲದಿದ್ರೆ ದೇಶ ಯಾಕ್ರೀ ಆಳ್ತೀರಿ? ಶಾಸಕ ಶಿವಲಿಂಗೇಗೌಡ