ಕೊಪ್ಪಳ: ಕೊರೊನಾ ಭೀತಿಯ ನಡುವೆ ನಾಳೆಯಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಈ ಹಿನ್ನೆಲೆ, ಯಾವುದೇ ಆತಂಕಕ್ಕೊಳಗಾಗದೆ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಶಿಕ್ಷಕರೊಬ್ಬರು ಜಾಗೃತಿ ಗೀತೆಯ ಮೂಲಕ ಮಕ್ಕಳನ್ನು ಶಾಲೆಗೆ ಆಹ್ವಾನಿಸಿದ್ದಾರೆ.
ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದ ಕ್ರಿಯಾಶೀಲ ಶಿಕ್ಷಕ ಹನುಮಂತಪ್ಪ ಕುರಿ ಅವರು ಸಿನೆಮಾ ಗೀತೆಯ ಸಂಗೀತಕ್ಕೆ ಸಾಹಿತ್ಯ ರಚಿಸಿ ಅದನ್ನು ತಾವೇ ಹಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ನಾಳೆ ಎಸ್ಸೆಸ್ಸೆಲ್ಸಿ- ಪಿಯು ಶಾಲಾರಂಭ: ಶಿಕ್ಷಣ ಸಚಿವರಿಂದ ಶಾಲಾ-ಕಾಲೇಜುಗಳ ಭೇಟಿ
ಕೋವಿಡ್ ಹಿನ್ನೆಲೆ ಅನೇಕ ತಿಂಗಳಿನಿಂದ ಶಾಲೆಗಳು ಮುಚ್ಚಿದ್ದವು. ಇದೀಗ ಶಾಲೆಗಳು ಪುನರಾರಂಭವಾಗುತ್ತಿವೆ. ಈ ಪರಿಸ್ಥಿತಿಯಲ್ಲಿ ಶಿಕ್ಷಣ ಇಲಾಖೆ ಕೈಗೊಂಡ ಸಿದ್ಧತೆ ಹಾಗೂ ಪಾಲಕರಿಗೆ ಮತ್ತು ಪೋಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಯಾವುದೇ ಆತಂಕ ಆಗದಂತೆ ನಾವು ಮಕ್ಕಳಿಗೆ ಶಿಕ್ಷಣ ಕೊಡಲು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ಒಳಗೊಂಡ ಜಾಗೃತಿ ಗೀತೆ ಹಾಡಿದ್ದಾರೆ. ಈ ಗೀತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.