ETV Bharat / state

ಗಾಂಧಿಯನ್ನು ಕೊಂದವರಿಂದ ಇಂತಹ ಮಾತೇ ಬರೋದು: ಸಿದ್ದರಾಮಯ್ಯ ಕಿಡಿ - news kannada

ಮಂಡ್ಯದಲ್ಲಿ ಕಾಂಗ್ರೆಸ್​ ಬಾವುಟ ಬಳಕೆ ಮಾಡಿದವರಾರೂ ನಮ್ಮ ಪಕ್ಷದ ಕಾರ್ಯಕರ್ತರಲ್ಲ  ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಾಲೂಕಿನ ಬಸಾಪುರ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Apr 4, 2019, 2:46 PM IST

Updated : Apr 4, 2019, 3:04 PM IST

ಕೊಪ್ಪಳ: ನನಗೆ ಮೈಸೂರಿನ ಮೇಲೆ ಇರುವ ಪ್ರೀತಿಯಷ್ಟೇ ಕೊಪ್ಪಳದ ಮೇಲೂ ಇದೆ ಎಂದು‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಾಲೂಕಿನ ಬಸಾಪುರದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಯಾರೋ ಕೆಲವರು ಕಾಂಗ್ರೆಸ್​ ಬಾವುಟ ಬಳಕೆ ಮಾಡಿರಬಹುದು. ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲ. ನಮ್ಮ ಪಕ್ಷದವರೋ ಅಥವಾ ಯಾವ ಪಕ್ಷದವರೋ ಗೊತ್ತಿಲ್ಲ. ಹಾಗೇನಾದರೂ ಬಳಕೆ ಮಾಡಿದ್ದರೆ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.

ತಾಲೂಕಿನ ಬಸಾಪುರ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿದ್ದರಾಮಯ್ಯ ಕೊಲೆಗಡುಕ ಎಂಬ ಕೆ.ಎಸ್.ಈಶ್ವರಪ್ಪನವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗಾಂಧಿಯನ್ನು ಕೊಂದವರಿಂದ ಇಂತಹ ಮಾತೇ ಬರೋದು.‌ ಬೇರೇನೂ ಬರಲು ಸಾಧ್ಯ? ಅವರಿಂದ ಒಳ್ಳೆಯ ಮಾತುಗಳು ಬರಲು ಸಾಧ್ಯವಿಲ್ಲ. ಈಶ್ವರಪ್ಪ ಮಹಾನ್ ಪೆದ್ದ. ಮೆದುಳಿಗೂ ನಾಲಿಗೆಗೂ ಹಿಡಿತ ತಪ್ಪಿದೆ. ಈಶ್ವರಪ್ಪನ ಬಗ್ಗೆ ಬಿಟ್ಟು ಬೇರೇನಾದ್ರು ಇದ್ರೆ ಕೇಳಿ ಎಂದರು.

ಮುಸ್ಲಿಮರು ಭಾರತದವರೇ ಎಂಬುದನ್ನು ಬಿಜೆಪಿಯವರು ಮರೆತುಬಿಟ್ಟಿದ್ದಾರೆ. ಬಿಜೆಪಿಗೆ ಕೆಲವು ಕಡೆ ಅಭ್ಯರ್ಥಿಗಳು ಸಿಕ್ಕಿಲ್ಲ. ಹಾಗಾಗಿ ಹಾಸನ, ಕಲಬುರಗಿಯಲ್ಲಿ ನಮ್ಮ ಕ್ಯಾಂಡಿಡೇಟ್​ಗಳನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದಾರೆ. ಈ ಬಾರಿ ಬಿಜೆಪಿ ಅಷ್ಟೊಂದು ವೀಕ್ ಆಗಿದೆ. ಈ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:

Body:ಕೊಪ್ಪಳ:- ನನಗೆ ಮೈಸೂರಿನ ಮೇಲಿನ ಇರುವ ಪ್ರೀತಿಯಷ್ಟೆ ಕೊಪ್ಪಳದ ಮೇಲೂ ಇದೆ ಎಂದು‌ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳ ತಾಲೂಕಿನ ಬಸಾಪುರ ಬಳಿ ಇರುವ ಖಾಸಗಿ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಯಾರೋ ಕೆಲವರು ಕಾಂಗ್ರೆಸ್ ಬಾವುಟ ಬಳಕೆ ಮಾಡಿರಬಹುದು. ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲ. ನಮ್ಮ ಪಕ್ಷದವರೋ ಅಥವಾ ಯಾವ ಪಕ್ಷದವರೋ ಗೊತ್ತಿಲ್ಲ. ಹಾಗೇನಾದ್ರೂ ಬಳಕೆ ಮಾಡಿದ್ರೆ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ತಾರೆ ಎಂದರು. ಇನ್ನು ಸಿದ್ದರಾಮಯ್ಯ ಕೊಲೆಗಡುಕ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗಾಂಧಿಯನ್ನು ಕೊಂದವರಿಂದ ಇಂತಹ ಮಾತೇ ಬರೋದು.‌ಬೇರೇನು ಬರಲು ಸಾಧ್ಯ. ಅವರಿಂದ ಒಳ್ಳೆಯ ಮಾತುಗಳು ಬರಲು ಸಾಧ್ಯವಿಲ್ಲ. ಈಶ್ವರಪ್ಪ ಮಹಾನ್ ಪೆದ್ದ. ಮೆದುಳಿಗೂ ನಾಲಿಗೆಗೂ ಹಿಡಿತ ತಪ್ಪಿದೆ. ಈಶ್ವರಪ್ಪನ ಬಗ್ಗೆ ಬಿಟ್ಟು ಬೇರೇನಾದ್ರೂ ಇದ್ರೆ ಕೇಳಿ ಎಂದರು. ಮುಸ್ಲಿಂರು ಭಾರತದವರೇ ಎಂಬುದನ್ನು ಬಿಜೆಪಿಯವರು ಮರೆತುಬಿಟ್ಟಿದ್ದಾರೆ. ಬಿಜೆಪಿಗೆ ಕೆಲವು ಕಡೆ ಅಭ್ಯರ್ಥಿಗಳು ಸಿಕ್ಕಿಲ್ಲ. ಹಾಸನ, ಕಲಬುರ್ಗಿಯಲ್ಲಿ ನಮ್ಮ ಕ್ಯಾಂಡಿಡೇಟ್ ಕರ್ಕೊಂಡ್ ಹೋಗಿ ನಿಲ್ಲಿಸಿದ್ದಾರೆ. ಈ ಬಾರಿ ಬಿಜೆಪಿ ಅಷ್ಟೊಂದು ವೀಕ್ ಆಗಿದೆ. ಈ ಚುನಾವಣೆಯಲ್ಲಿ ನಾವು ೨೦ ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದರು. ಇನ್ನು ನಾನು ಯಾರನ್ನೂಪಕ್ಷ ಬಿಡಲು ಹೇಳಿಲ್ಲ ಎಂದು ಎಚ್.ವಿಶ್ವನಾಥ ಹೇಳಿಕೆಗೆ ಸಿದ್ದರಾಮಯ್ಯ ತೀಷ್ಕ್ಣವಾಗಿ ಪ್ರತಿಕ್ರಿಯಿಸಿದರು.

Conclusion:
Last Updated : Apr 4, 2019, 3:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.