ETV Bharat / state

ಕೊಪ್ಪಳ: 767 ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ!

author img

By

Published : Feb 1, 2021, 6:48 PM IST

ಕೊಪ್ಪಳ ಜಿಲ್ಲೆಯಲ್ಲಿ 1,850 ಅಂಗನವಾಡಿಗಳ ಪೈಕಿ 767 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಾಡಿಗೆ ಮತ್ತು ಇತರ ಕಟ್ಟಡ, ದೇವಸ್ಥಾನಗಳಲ್ಲಿ ಅಂಗನವಾಡಿ ನಡೆಯುತ್ತಿವೆ.

Anganavadi center
ಅಂಗನವಾಡಿ ಕೇಂದ್ರ

ಕೊಪ್ಪಳ: ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ನಲುಗುತ್ತಿರುವ ಹಾಗೆ ನೂರಾರು ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯಗಳೆಂಬ ಪೌಷ್ಟಿಕತೆಯಿಲ್ಲದೆ ಬಳಲುತ್ತಿವೆ. ಸ್ವಂತ ಕಟ್ಟಡ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ ಮೂಮತಾದ ಮೂಲಸೌಲಭ್ಯಗಳು ಅಂಗನವಾಡಿಗಳಿಗೆ ಇಲ್ಲದಂತಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 1,850 ಅಂಗನವಾಡಿಗಳ ಪೈಕಿ 767 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಾಡಿಗೆ ಮತ್ತು ಇತರ ಕಟ್ಟಡ, ದೇವಸ್ಥಾನಗಳಲ್ಲಿ ಅಂಗನವಾಡಿ ನಡೆಯುತ್ತಿವೆ. ಸ್ವಂತ ಕಟ್ಟಡವಿರುವ 1083 ಹಾಗೂ ಕಟ್ಟಡ ಇಲ್ಲದ 151 ಕೇಂದ್ರಗಳಲ್ಲಿ ಶೌಚಾಲಯಗಳಿವೆ.

ಇದನ್ನೂ ಓದಿ...ಆತ್ಮನಿರ್ಭರ ಅಲ್ಲ, ಆತ್ಮಬರ್ಬಾದ್​ ಬಜೆಟ್​ ಕೊಟ್ಟಿದ್ದಾರೆ: ಸಿದ್ದರಾಮಯ್ಯ

ಕಟ್ಟಡ ಹೊಂದಿರುವ 238 ಹಾಗೂ ಇತರೆ 130 ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರು, 427 ಕೇಂದ್ರಗಳಿಗೆ ವಿದ್ಯುತ್ ಸಂಪರ್ಕವಿದೆ. ಹಂತ ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಹೇಳಿದರು.

ಅಂಗನವಾಡಿಗಳಿಗೆ ಮೂಲಸೌಲಭ್ಯಗಳ ಕುರಿತು ಅಭಿಪ್ರಾಯ

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಸಂಜೆ ಅವಧಿಯಲ್ಲಿ ಜನರು ಅಂಗನವಾಡಿ ಕೇಂದ್ರಗಳ ಮುಂದೆ ಕುಳಿತು ಗಲೀಜು ಮಾಡುತ್ತಾರೆ. ಹೀಗಾಗಿ, ಅಲ್ಲಿ ಸ್ವಚ್ಛತೆ ಕೊರತೆಯೂ ಇದೆ. ಪ್ರತಿ ಅಂಗನವಾಡಿ ಕೇಂದ್ರದಲ್ಲೂ ₹50 ಸಾವಿರ ವೆಚ್ಚದಲ್ಲಿ ಸಿಂಟೆಕ್ಸ್ ಟ್ಯಾಂಕ್ ನಿರ್ಮಿಸಬೇಕಿದೆ.

ಕುಡಿಯುವ ನೀರು, ವಿದ್ಯುತ್, ಸ್ವಂತ ಕಟ್ಟಡ, ಸಣ್ಣ ಕಟ್ಟಡಗಳ ವಿಸ್ತರಣೆ, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.