ಕೋಲಾರ : ಮಂಗಳೂರಿನಲ್ಲಿ ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರದಲ್ಲಿ ಪೊಲೀಸರು ರಕ್ಷಣೆ ಮಾಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಉಜಿರೆ ಮೂಲದ ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ಎಂಬ ಬಾಲಕನನ್ನು ಡಿ.17ರಂದು ದುಷ್ಕರ್ಮಿಗಳು ಅಪಹರಣ ಮಾಡಿ ಸುಮಾರು ₹17 ಕೋಟಿ ಹಣದ ಬೇಡಿಕೆ ಇಟ್ಟಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಬಾಲಕನನ್ನು ರಕ್ಷಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕೋಮುಲ್ ಪ್ರಕರಣದ ರೂವಾರಿಯಾಗಿದ್ದು, ಈತನಿಗೆ ಮಾಲೂರು ಮೂಲದ ನೀರಿನ ಟ್ಯಾಂಕರ್ ಚಾಲಕನಾದ ಮಹೇಶ್ ಎಂಬುವನು ಸ್ನೇಹಿತನಾಗಿದ್ದಾನೆ.
ಇವನ ಸಹಾಯದೊಂದಿಗೆ ಕಿಡ್ನಾಪರ್ಸ್ ತಂಡ ಬಾಲಕನನ್ನು ಅಪಹರಣ ಮಾಡಿ ಮಾಲೂರಿಗೆ ಕರೆದುಕೊಂಡು ಬಂದಿದ್ದಾರೆ. ಕಳೆದ ರಾತ್ರಿ ಚಾಲಕ ಮಹೇಶ್ ತಾಲೂಕಿನ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಎಂಬುವನ ಮನೆಗೆ ಬಾಲಕನನ್ನು ಕಿಡ್ನಾಪರ್ಸ್ ತಂಡ ಕರೆದುಕೊಂಡು ಬಂದು ಅಲ್ಲೇ ಉಳಿದುಕೊಂಡಿದ್ದರು.
ಓದಿ: ಉಜಿರೆಯ 8 ವರ್ಷದ ಬಾಲಕ ಕಿಡ್ನಾಪ್ ಕೇಸ್ ಸುಖಾಂತ್ಯ: ಕೋಲಾರದಲ್ಲಿ ಅಪಹರಣಕಾರರ ಬಂಧನ
ಈ ವೇಳೆ ಮಂಜುನಾಥ್ ಮೊಬೈಲ್ನಿಂದ ಕಿಡ್ನಾಪರ್ ಕಿಂಗ್ಪಿನ್ ಕಮಲ್ನ ಬೇರೊಂದು ನಂಬರ್ಗೆ ಕಾಲ್ ಮಾಡಿದಾಗ ಬಾಲಕನನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳನ್ನು ಹುಡುಕಾಟ ನಡೆಸುತ್ತಿದ್ದ ಮಂಗಳೂರಿನ ವಿಶೇಷ ಪೊಲೀಸ್ ತಂಡಕ್ಕೆ ಮೊಬೈಲ್ ಲೊಕೇಷನ್ ಮಾಲೂರು ಭಾಗದಲ್ಲಿ ಸಿಗುತ್ತದೆ.
ಕೂಡಲೇ ಕೋಲಾರದ ಎಸ್ಪಿ ಕಾರ್ತಿಕ್ ರೆಡ್ಡಿ ಸಹಾಯದೊಂದಿಗೆ ಮಂಗಳೂರು ಪೊಲೀಸ್ ಹಾಗೂ ಕೋಲಾರದ ಮಾಸ್ತಿ ಪೊಲೀಸರು, ಮಂಜುನಾಥ್ ಮನೆ ಮೇಲೆ ದಾಳಿ ನಡೆಸಿ ಬಾಲಕನನ್ನ ರಕ್ಷಣೆ ಮಾಡಿದ್ದಾರೆ.
ಓದಿ: ಉಜಿರೆ ಬಾಲಕನ ಅಪಹರಣ ಕೇಸ್; 17 ಕೋಟಿಗೆ ಬೇಡಿಕೆ ಇಟ್ರಾ ಕಿಡ್ನಾಪರ್ಸ್?
ಇದೇ ವೇಳೆ ಮಂಗಳೂರು ಮೂಲದ ಗಂಗಾಧರ್ ಸೇರಿದಂತೆ ನಾಲ್ವರು ಅರೋಪಿಗಳು ಹಾಗೂ ಕಿಡ್ನಾಪರ್ಸ್ಗೆ ಸಹಕರಿಸಿದ ಮಹೇಶ್, ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಾಲಕನನ್ನ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.