ETV Bharat / state

ಕೋಲಾರ ಪರಿಷತ್​ ಚುನಾವಣೆ: ಭರ್ಜರಿ ಜಯ ಸಾಧಿಸಿದ ಕೈ ಅಭ್ಯರ್ಥಿ ಅನಿಲ್​ಕುಮಾರ್​​​ - ಕೋಲಾರ ಪರಿಷತ್​ ಚುನಾವಣೆ

ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕೋಲಾರ ವಿಧಾನ ಪರಿಷತ್​​​ ಚುನಾವಣೆಯಲ್ಲಿ 445 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್​ ಅಭ್ಯರ್ಥಿ ಎಂ.ಎಲ್​. ಅನಿಲ್​ ಕುಮಾರ್​​ ಗೆಲುವಿನ ನಗೆ ಬೀರಿದ್ದಾರೆ.

ml-anilkumar-won-in-council-election
ಕೋಲಾರ ಪರಿಷತ್​ ಚುನಾವಣೆ
author img

By

Published : Dec 14, 2021, 2:24 PM IST

Updated : Dec 14, 2021, 9:41 PM IST

ಕೋಲಾರ: ಕೋಲಾರ: ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದುಕೊಂಡಿದ್ದ ಪಕ್ಷಗಳೇ ಕೊನೆಗೆ ಜಿದ್ದಾ ಜಿದ್ದಿಗೆ ಬಿದ್ದು, ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎನ್ನುವಂತೆ ಕಾಂಗ್ರೆಸ್ ಗೆದ್ದಿದೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರವನ್ನು ಮೀರಿಸುವಂತೆ ಕಾಂಗ್ರೆಸ್​ ಅಭ್ಯರ್ಥಿ ಅನಿಲ್​ ಕುಮಾರ್ ಗೆಲುವು ಸಾಧಿಸಿದ್ದಾರೆ.

ಬಿಜೆಪಿ, ಜೆಡಿಎಸ್ ಮಧ್ಯದ ಜಿದ್ದಾಜಿದ್ದಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನದ ಮಧ್ಯೆಯೂ ಅನಿಲ್​ ಕುಮಾರ್ ಗೆದ್ದಿದ್ದಾರೆ. ಒಟ್ಟು 5587 ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್​ ಕುಮಾರ್​ಗೆ 2340 ಮತಗಳನ್ನು ಪಡೆದು ಜಯಗಳಿಸಿದ್ರೆ, ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್​ಗೆ 1899 ಮತ ಸಿಕ್ಕಿದೆ, ಜೆಡಿಎಸ್ ಅಭ್ಯರ್ಥಿ ರಾಮಚಂದ್ರಗೆ 1438 ಮತಗಳು ಸಿಕ್ಕಿವೆ, ಪಕ್ಷೇತರ ಅಭ್ಯರ್ಥಿ ಮತ್ತೊಬ್ಬ ಅನಿಲ್​ ಕುಮಾರ್​-10 ಮತ, 177 ಮತಗಳು ಅಸಿಂಧುವಾಗಿವೆ. ಈ ಮೂಲಕ ಕಾಂಗ್ರೆಸ್​ ಪಕ್ಷಕ್ಕೆ​ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೊಸ ಹುಮ್ಮಸ್ಸು ಬಂದಂತಾಗಿದೆ.

ಗೆಲುವಿನ ಬಳಿಕ ಕೈ ಕಾರ್ಯಕರ್ತರು ಪಟಾಕಿ ಹೊಡೆದು ಸಂಭ್ರಮಿಸಿದರು.

Last Updated : Dec 14, 2021, 9:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.