ETV Bharat / state

ಕೋಲಾರಕ್ಕೆ ಎಂಟಿಬಿ ನಾಗರಾಜ್‌ ಭೇಟಿ ವೇಳೆ ಜನಜಾತ್ರೆ.. ಸಚಿವರು, ಸಂಸದರ ವಿರುದ್ಧ ಶಾಸಕಿ ರೂಪಕಲಾ ಗರಂ.. - Muniswamy, MP

ಕೆಜಿಎಫ್ ಶಾಸಕಿ ರೂಪಕಲಾ ಸಚಿವ ಎಂಟಿಬಿ ಹಾಗೂ ಸಂಸದ ಮುನಿಸ್ವಾಮಿ ವಿರುದ್ದ ಹರಿಹಾಯ್ದರು. ಬೆಂಬಲಿಗರು ಹಾಗೂ ಕಾರ್ಯಕರ್ತರು ಹೆಚ್ಚಾಗಿರುವ ಪರಿಣಾಮ, ವ್ಯಾಪಾರಸ್ಥರ ಸಮಸ್ಯೆ ಆಲಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕಿ ರೂಪಕಲಾ ಗರಂ ಆದರು..

Minister MTB Nagaraj visits to kolara
ಸಚಿವ,ಸಂಸದರ ವಿರುದ್ಧ ಶಾಸಕಿ ರೂಪಕಲಾ ಗರಂ
author img

By

Published : Feb 22, 2021, 5:01 PM IST

ಕೋಲಾರ : ಪೌರಾಡಳಿತ ಹಾಗೂ ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಕೆಜಿಎಫ್ ನಗರಸಭೆ ಮಳಿಗೆಗಳ ವೀಕ್ಷಣೆ ವೇಳೆ ಜನಜಂಗುಳಿಯಿಂದಾಗಿ ತಳ್ಳಾಟ-ನೂಕಾಟ ನಡೆದಿದೆ. ಎಂಟಿಬಿ ನಾಗರಾಜ್‌ ಕೆಜಿಎಫ್​ಗೆ ಭೇಟಿ ನೀಡಿ, ಮಳಿಗೆಗಳ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರವೂ ಇಲ್ಲದೆ ಮಾಸ್ಕ್ ಸಹ ಧರಿಸದೆ ಜನ ಜಂಗುಳಿ ಹೆಚ್ಚಾಗಿತ್ತು. ಕೊರೊನಾ 2ನೇ ಅಲೆ ಭೀತಿಯ ಸಮಯದಲ್ಲಿ ಈ ರೀತಿ ನಿರ್ಲಕ್ಷ್ಯವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ‌ಕಾರಣವಾಯಿತು.

ಸಚಿವ ಎಂಟಿಬಿ ನಾಗರಾಜ್‌ ಕೋಲಾರಕ್ಕೆ ಭೇಟಿ ನೀಡಿದ ವೇಳೆ ಜನಜಂಗುಳಿ..

ಅಲ್ಲದೆ ಇದೇ ವೇಳೆ ಕೆಜಿಎಫ್ ಶಾಸಕಿ ರೂಪಕಲಾ ಸಚಿವ ಎಂಟಿಬಿ ಹಾಗೂ ಸಂಸದ ಮುನಿಸ್ವಾಮಿ ವಿರುದ್ದ ಹರಿಹಾಯ್ದರು. ಬೆಂಬಲಿಗರು ಹಾಗೂ ಕಾರ್ಯಕರ್ತರು ಹೆಚ್ಚಾಗಿರುವ ಪರಿಣಾಮ, ವ್ಯಾಪಾರಸ್ಥರ ಸಮಸ್ಯೆ ಆಲಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕಿ ರೂಪಕಲಾ ಗರಂ ಆದರು.

ಇದೇ ವೇಳೆ ಎಂಟಿಬಿ ನಗರದ ಹೊರವಲಯದ ಕೊಂಡರಾಜನಹಳ್ಳಿ ಬಳಿ ಇರುವ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಕೋಲಾರ ಜಿಲ್ಲೆಯ ಕೆಜಿಎಫ್​ ನಗರಸಭೆಯಲ್ಲಿ ಅಧಿಕಾರಿಗಳೊಂದಿಗೆ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.