ಕೋಲಾರ : ಕೊರೊನಾ ಸೋಂಕು ಕಡಿಮೆ ಇದ್ದ ಸಂದರ್ಭದಲ್ಲಿ ಸರ್ಕಾರಗಳು ಲಾಕ್‌ಡೌನ್ ಮಾಡಿದ್ದವು. ಹೆಚ್ಚಾದಾಗ ಓಪನ್ ಮಾಡುವುದರ ಮೂಲಕ ಎಡವಟ್ಟು ಮಾಡುತ್ತಿವೆ ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು.
ಇಂದು ಕೋಲಾರದ ಬಂಗಾರಪೇಟೆ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಮಾಡಬೇಕೆಂಬುದು ನಮ್ಮ ಇಚ್ಛೆ ಇದ್ದರೂ ಕೂಡ ಸರ್ಕಾರಗಳು ಎಡವಟ್ಟು ಮಾಡಿವೆ. ಅಲ್ಲದೆ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಆರೋಪಿಸಿದರು.
ಮೆಡಿಸಿನ್, ಬೆಡ್‌ಗಳ ವ್ಯವಸ್ಥೆ ಸೇರಿ ಕೊರೊನಾ ವಾರಿಯರ್ಸ್ಗೆ ಸಂಬಳ ನೀಡುತ್ತಿಲ್ಲ. ಜೊತೆಗೆ ಪಿಪಿಇ ಕಿಟ್‌ಗಳನ್ನು ಸಹ ಸರಿಯಾಗಿ ಪೂರೈಸುತ್ತಿಲ್ಲ. ಅಲ್ಲದೆ ಎಲ್ಲಾ ರಂಗದಲ್ಲೂ ಕೂಡ ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ನಾಗೇಶ್ ಪ್ರತಿಕ್ರಿಯಿಸಿ, ಲಾಕ್‌ಡೌನ್ ಮಾಡಿದ್ರೆ ಆರ್ಥಿಕವಾಗಿ ತೊಂದರೆಯಾಗುತ್ತದೆ. ಅಲ್ಲದೆ ಭಾನುವಾರಗಳಂದು ಸೀಲ್‌ಡೌನ್ ವೇಳೆ ಬಾರ್‌ಗಳ ಓಪನ್ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಈ ವೇಳೆ ತಿಳಿಸಿದರು.