ಕೊಡಗು: ರೋಗಿಗಳ ಅನುಕೂಲಕ್ಕೆ ಮೂರು ಹೊಸ ಬಿಎಲ್‌ಎಸ್ ಮಾದರಿಯ ಆ್ಯಂಬುಲೆನ್ಸ್ ವಾಹನಗಳಿಗೆ ಶಾಸಕ ಅಪ್ಪಚ್ಚು ರಂಜನ್ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಚಾಲನೆ ನೀಡಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಜೀವ ರಕ್ಷಕ ವಾಹನಗಳಿಗೆ ಬೇಡಿಕೆ ಇತ್ತು. ಈ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮೂರು ಆ್ಯಂಬುಲೆನ್ಸ್‌ಗಳನ್ನು ಖರೀದಿಸಿದ್ದೇವೆ. ಜಿಲ್ಲಾಕೇಂದ್ರ ಮಡಿಕೇರಿ, ವಿರಾಜಪೇಟೆ ಹಾಗೂ ಮಾದಾಪುರ ಭಾಗಗಳಿಗೆ ಇವುಗಳನ್ನು ಮೀಸಲಿಟ್ಟಿದ್ದೇವೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಜಿಲ್ಲಾಧಿಕಾರಿಗಳು ಎಸ್ಡಿಆರ್ಎಫ್ ಹಣದಿಂದ 5 ಆ್ಯಂಬುಲೆನ್ಸ್‌ಗಳನ್ನು ರೋಗಿಗಳನ್ನು ಕರೆತರಲು ಹಾಗೂ ಗಂಟಲು ದ್ರವ ರವಾನೆಗೆ 5 ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ರೋಗಿಗಳಿಗೆ ಜೀವ ರಕ್ಷಕ ವಾಹನಗಳ ಕೊರತೆ ಇಲ್ಲ ಎಂದು ಡಿಹೆಚ್ಓ ಡಾ. ಮೋಹನ್ ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.