ETV Bharat / state

ಕೊಡಗಿನಲ್ಲಿ ಪುತ್ತರಿ ಹಬ್ಬದ ಕೋಲಾಟ ಸಂಭ್ರಮ..!

ಮಡಿಕೇರಿ ತಾಲೂಕಿನ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್ ನಲ್ಲೂ ಸಾಮೂಹಿಕ ಕೋಲಾಟ ಸಡಗರದಿಂದ ನಡೆಯಿತು. ನಾಪೋಕ್ಲು, ಕೋಕೇರಿ ಮತ್ತು ಬೇತು ಗ್ರಾಮಗಳ ನೂರಾರು ಜನರು ನೂರಂಬಾಡ ಮಂದ್ ನಲ್ಲಿ ಸೇರಿ ಸಂಭ್ರಮದಿಂದ ಕೋಲಾಟ ಆಡಿದರು.

kolata-on-putthari-festival-in-kodagu
ಕೊಡಗಿನಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಕೋಲಾಟದ ಸಂಭ್ರಮ..!
author img

By

Published : Dec 4, 2020, 7:41 PM IST

ಕೊಡಗು: ಜಿಲ್ಲೆಯಲ್ಲಿ ಪುತ್ತರಿ ಹಬ್ಬಕ್ಕೆ ಅದರದ್ದೇ ಆದ ಅತ್ಯಂತ ವಿಶೇಷ ಸ್ಥಾನವಿದೆ. ಸುಗ್ಗಿಯ ಹಬ್ಬವಾಗಿರುವ ಪುತ್ತರಿಯ ಅಂಗವಾಗಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಕೊಳ್ಳುವುದೆಂದರೆ ಅಲ್ಲಿನ ಜನರಿಗೆ ಇನ್ನಿಲ್ಲದ ಸಂಭ್ರಮ ಸಡಗರ. ಈ ಬಾರಿಯೂ ಕೋಲಾಟ ಆಡುವುದರ ಮೂಲಕ ಕೊಡಗಿನವರು ಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಸಂಭ್ರಮಿಸಿದ್ದಾರೆ.

ಕೊಡಗಿನಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಕೋಲಾಟದ ಸಂಭ್ರಮ..!

ಪೂಜೆ ವೇಳೆ ಮನೆಗೆ ಐದು ವಿಧದ ಮರಗಿಡಗಳ ಎಲೆಗಳನ್ನು ತಂದು ನೆರೆ ಕಟ್ಟಿ ಕುಲದೇವರಾದ ಇಗ್ಗುತ್ತಪ್ಪ ಮತ್ತು ಮಾತೆ ಕಾವೇರಿಯನ್ನು ಪೂಜಿಸುತ್ತಾರೆ. ಆ ಬಳಿಕ ಗದ್ದೆಗಳಿಗೆ ಹೋಗಿ ಕದಿರು ಕೊಯ್ದು ಧಾನ್ಯ ಲಕ್ಷ್ಮಿಯನ್ನು ಶ್ರದ್ಧಾಭಕ್ತಿಯಿಂದ ಮನೆಗೆ ಬರಮಾಡಿಕೊಳ್ಳಲಾಗುತ್ತದೆ. ಆಚರಣೆಯ ಭಾಗವಾಗಿ ಪೂಜೆಯ ಮರುದಿನವೇ ಪ್ರತಿ ಊರಿನ ಮಂದ್‌ಗಳಲ್ಲಿ ಕೋಲಾಟಗಳು ನಡೆಯುತ್ತವೆ.

ಮಡಿಕೇರಿ ತಾಲೂಕಿನ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್ ನಲ್ಲೂ ಸಾಮೂಹಿಕ ಕೋಲಾಟ ಸಡಗರದಿಂದ ನಡೆಯಿತು. ನಾಪೋಕ್ಲು, ಕೋಕೇರಿ ಮತ್ತು ಬೇತು ಗ್ರಾಮಗಳ ನೂರಾರು ಜನರು ನೂರಂಬಾಡ ಮಂದ್ ನಲ್ಲಿ ಸೇರಿ ಸಂಭ್ರಮದಿಂದ ಕೋಲಾಟ ಆಡಿದರು. ಇದಕ್ಕೂ ಮೊದಲು ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಿಂದ ಮುಖ್ಯಸ್ಥರೆಲ್ಲ ಸೇರಿ ದೇವರ ತಿರುವಾಭರಣಗಳನ್ನು ಕೊಂಡು ಕಾಪಾಳ ಕಳಿ ವೇಷಾಧಾರಿಗಳೊಂದಿಗೆ ನೂರಂಬಾಡ ಮಂದ್ ಗೆ ಬಂದರು. ಮೆರವಣಿಗೆ ಉದ್ದಕ್ಕೂ ಕೊಂಬು ಕೊಟ್ ವಾದ್ಯಗಳೊಂದಿಗೆ ಕಾಪಾಳ ಕಳಿ ವೇಷಾಧಾರಿಗಳು ಕುಣಿದರು. ಬಳಿಕ ನೂರುಂಬಾಡ ಮಂದ್ ನಲ್ಲಿ ಸೇರಿದ ನೂರಾರು ಜನರು ಸಾಮೂಹಿಕ ಕೋಲಾಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಚಿಕ್ಕ ಮಕ್ಕಳು ಕೂಡ ಕೋಲಾಟದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದ್ದು ಎಲ್ಲರ ಮನಸೂರೆಗೊಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.