ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆ ಸಮೀಪದ ನಿಲುವಾಗಿಲು-ಬೇಸೂರು ಗ್ರಾಮದ ಶ್ರೀಕ್ಷೇತ್ರ ಬಾಲ ತ್ರಿಪುರಸುಂದರಿ ದೇವಾಲಯ ಆವರಣದಲ್ಲಿ ಒಂಟಿ ಸಲಗವೊಂದು ಹಲವು ದಿನಗಳಿಂದ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಉಂಬಳಿ ಬೆಟ್ಟದಿಂದ ಕಟ್ಟೆಪುರ ಅರಣ್ಯಕ್ಕೆ ಬಂದು ನೆಲೆಸುವ ಸಲಗ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಕೋಣಿಗನಹಳ್ಳಿ, ಬಸವನಾರೆ, ಮನುಗನಹಳ್ಳಿ, ನಿಲುವಾಗಿಲು-ಬೆಸೂರು ಗ್ರಾಮಗಳ ರೈತರ ಗದ್ದೆ, ತೋಟಗಳಿಗೆ ಲಗ್ಗೆಯಿಟ್ಟು ಬೆಳೆಗಳನ್ನು ತಿಂದು ಹಾನಿ ಮಾಡುತ್ತಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.