ಕೊಡಗು: ಜಿಲ್ಲೆಯಲ್ಲಿಂದು ಮತ್ತೆ ಎರಡು ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಅಣ್ಣೇಗೌಡ ಬಡಾವಣೆಯ (43) ವರ್ಷದ ವ್ಯಕ್ತಿಗೆ ಮತ್ತು ವಿರಾಜಪೇಟೆ ಪಟ್ಟಣದ ಮೀನುಪೇಟೆ ನಿವಾಸಿಯಾದ (41) ವರ್ಷದ ವ್ಯಕ್ತಿಗೆ ಸೋಂಕಿತರಾಗಿದ್ದಾರೆ.
ಕುಶಾಲನಗರದ ವ್ಯಕ್ತಿಗೆ ಜ್ವರದ ಕಂಡುಬಂದ ಹಿನ್ನೆಲೆ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಗೊತ್ತಾಗಿದೆ. ವಿರಾಜಪೇಟೆ ನಿವಾಸಿ ವಿದೇಶದಿಂದ ಮರಳಿದ್ದರು ಎನ್ನಲಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ವಿರಾಜಪೇಟೆಯ ಮೀನುಪೇಟೆ ಹಾಗೂ ಕುಶಾಲನಗರದ ಅಣ್ಣೇಗೌಡ ಬಡಾವಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ 20 ಪ್ರದೇಶಗಳನ್ನು ಕಂಟೈನ್ಮೆಂಟ್ ಎಂದು ಘೋಷಿಸಲಾಗಿದೆ.