ಕಲಬುರಗಿ: ಸಾರಿಗೆ ನೌಕರರ ಮುಷ್ಕರ ಆರಂಭವಾಗಿ 2 ವಾರಗಳು ಕಳೆದಿವೆ. ಇದರ ಪರಿಣಾಮ ಈಶಾನ್ಯ ಸಾರಿಗೆ ಸಂಸ್ಥೆ ಇಲ್ಲಿಯವರೆಗೆ 59 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರ ಮನವೊಲಿಕೆ, ವರ್ಗಾವಣೆ, ವಜಾ.. ಹೀಗೆ ಸರ್ಕಾರದ ಹಲವು ತಂತ್ರಗಳ ಪ್ರಯೋಗದಿಂದ ಕೆಲವು ನೌಕರರು ಮರಳಿ ಸೇವೆಗೆ ಬಂದಿದ್ದಾರೆ. ಈ ಪ್ರಯತ್ನದ ಫಲವಾಗಿ ಈಶಾನ್ಯ ಸಾರಿಗೆ ವ್ಯಾಪ್ತಿಯಲ್ಲಿ ಈಗಾಗಲೇ 1,229 ಬಸ್ಗಳನ್ನು ರಸ್ತೆಗೆ ಇಳಿಸಲಾಗಿದೆ.
ಪ್ರಯಾಣಿಕರಿಗೆ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಕೂಡಾ ಮುಂದುವರೆಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ತಿಳಿಸಿದರು.