ETV Bharat / state

ಕಲಬುರಗಿ: ಬಿಜೆಪಿ ಜನಸೇವಕ ಸಮಾವೇಶ ಇಂದು.. ಸಿದ್ಧತೆ ಪೂರ್ಣ - BJP Jansewaka Convention

ಕಲಬುರಗಿಯಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯುವ ಬಿಜೆಪಿ ಜನಸೇವಕ ಸಮಾವೇಶಕ್ಕೆ ಭರದ ಸಿದ್ದತೆ ಮಾಡಿಕೊಳ್ಳಲಾಗಿದ್ದು, ನಗರದಲ್ಲೆಡೆ ಬಿಜೆಪಿ ಬಾವುಟ, ಕಟೌಟ್, ಬ್ಯಾನರ್​ಗಳು ರಾರಾಜಿಸುತ್ತಿವೆ.

preparations-for-bjp-jansewaka-convention-in-kalaburagi
ಕಲಬುರಗಿ: ಬಿಜೆಪಿ ಜನಸೇವಕ ಸಮಾವೇಶಕ್ಕೆ ಭರದ ಸಿದ್ಧತೆ
author img

By

Published : Jan 11, 2021, 12:55 PM IST

ಕಲಬುರಗಿ: ನಗರದ ನೂತನ ವಿದ್ಯಾಲಯದಲ್ಲಿ ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶಕ್ಕೆ ಭರದ ಸಿದ್ದತೆ ಮಾಡಲಾಗಿದೆ.

ಕಲಬುರಗಿ: ಬಿಜೆಪಿ ಜನಸೇವಕ ಸಮಾವೇಶಕ್ಕೆ ಭರದ ಸಿದ್ಧತೆ

ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನಿಸಲು ಹಾಗೂ ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ತಯಾರಿ ದೃಷ್ಟಿಯಿಂದ ಬಿಜೆಪಿ ಜನಸೇವಕ ಸಮಾವೇಶ ಆಯೋಜಿಸಲಾಗಿದೆ. ಕಲಬುರಗಿಯಲ್ಲಿ ಇಂದು ನಡೆಯುವ ಸಮಾವೇಶದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಪ್ರಭು ಚವ್ಹಾಣ್​, ಶಶಿಕಲಾ ಜೊಲ್ಲೆ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು, ಸಚಿವರು, ಸಂಸದರು ಭಾಗಿಯಾಗಲಿದ್ದಾರೆ.

ಇಂದು ಸಂಜೆ 5 ಗಂಟೆಗೆ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ನಗರದಲ್ಲೆಡೆ ಬಿಜೆಪಿ ಬಾವುಟ, ಕಟೌಟ್, ಬ್ಯಾನರ್​ಗಳು ರಾರಾಜಿಸುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.