ETV Bharat / state

ನಟ ಪುನೀತ್ ರಾಜ್​ಕುಮಾರ್‌ಗೆ ರಾಷ್ಟ್ರಮಟ್ಟದ ಸಿದ್ದಶ್ರೀ ಪ್ರಶಸ್ತಿ ಘೋಷಣೆ - ರಾಷ್ಟ್ರಮಟ್ಟದ ಸಿದ್ದಶ್ರೀ ಪ್ರಶಸ್ತಿ ಘೋಷಣೆ

ದುರಾದೃಷ್ಟವಶಾತ್ ಪುನೀತ್ ಇಂದು ನಮ್ಮನ್ನಗಲಿದ್ದಾರೆ. ಹೀಗಾಗಿ, ಮರಣೋತ್ತರವಾಗಿ ಅವರಿಗೆ ಪ್ರಶಸ್ತಿ ನೀಡಲಾಗುವುದು. ಈಗಾಗಲೇ ಪುನೀತ್ ಅವರ ಕುಟುಂಬದವರನ್ನ ಸಂಪರ್ಕಿಸಿ ಮಾಹಿತಿ ನೀಡಲಾಗಿದೆ' ಎಂದರು..

puneeth-rajkumar
ನಟ ಪುನೀತ್ ರಾಜ್​ಕುಮಾರ್‌
author img

By

Published : Nov 16, 2021, 8:10 PM IST

ಕಲಬುರಗಿ: ರಾಷ್ಟ್ರಮಟ್ಟದ ಸಿದ್ದಶ್ರೀ ಪ್ರಶಸ್ತಿ (Siddashree Award)ಯನ್ನು ಈ ಬಾರಿ ಮರಣೋತ್ತರವಾಗಿ ಪುನೀತ್ ರಾಜ್​ಕುಮಾರ್ (puneeth rajkumar)​ ಅವರಿಗೆ ನೀಡಲು ತೀರ್ಮಾನಿಸಲಾಗಿದೆ.

ಈ ಕುರಿತು ಮುಗಳಖೋಡ ಹಾಗೂ ಕಲಬುರಗಿಯ ಜಿಡಗಾ ಶ್ರೀಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ವೀರಮಹಾಂತ ಶಿವಾಚಾರ್ಯರು (Veeramahanta Shivacharya) ಮಾತನಾಡಿದರು.

ಸಿದ್ದಶ್ರೀ ಪ್ರಶಸ್ತಿ ಕುರಿತಂತೆ ವೀರಮಹಾಂತ ಶಿವಾಚಾರ್ಯರು ಮಾತನಾಡಿರುವುದು..

'ಪುನೀತ್​ ರಾಜ್​ಕುಮಾರ್ ಅವರಿಗೆ ಕಳೆದ ಬಾರಿಯೇ ಸಿದ್ದಶ್ರೀ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮ ರದ್ದುಪಡಿಸಲಾಗಿತ್ತು.

ದುರಾದೃಷ್ಟವಶಾತ್ ಪುನೀತ್ ಇಂದು ನಮ್ಮನ್ನಗಲಿದ್ದಾರೆ. ಹೀಗಾಗಿ, ಮರಣೋತ್ತರವಾಗಿ ಅವರಿಗೆ ಪ್ರಶಸ್ತಿ ನೀಡಲಾಗುವುದು. ಈಗಾಗಲೇ ಪುನೀತ್ ಅವರ ಕುಟುಂಬದವರನ್ನ ಸಂಪರ್ಕಿಸಿ ಮಾಹಿತಿ ನೀಡಲಾಗಿದೆ' ಎಂದರು.

ಮುಗಳಖೋಡ ಹಾಗೂ ಕಲಬುರಗಿಯ ಜಿಡಗಾ ಶ್ರೀಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮದ ನಿಮಿತ್ತವಾಗಿ ಸಿದ್ದಶ್ರೀ ಪ್ರಶಸ್ತಿಯನ್ನು ಕೊಡ ಮಾಡುವ ಪದ್ಧತಿಯಿದೆ.

ರಾಷ್ಟ್ರಮಟ್ಟದ ಪ್ರಶಸ್ತಿಯಾಗಿರುವ ಸಿದ್ದಶ್ರೀ ಪ್ರಶಸ್ತಿಯನ್ನು ಈ ಹಿಂದೆ ಪಂ. ಪುಟ್ಟರಾಜ ಗವಾಯಿಗಳು, ಪ್ರಭಾಕರ ಕೋರೆ, ಶಿವಕುಮಾರ ಸ್ವಾಮೀಜಿ, ರವಿಶಂಕರ್​ ಗುರೂಜಿ, ಬಾಬಾ ರಾಮದೇವರಂತಹ ಸಾಧಕರಿಗೆ ಪ್ರದಾನ ಮಾಡಲಾಗಿದೆ.

ಡಿ.2ರಂದು ಕಲಬುರಗಿ ಜಿಲ್ಲೆ ಜಿಡಗಾ ಶ್ರೀಮಠದಲ್ಲಿ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಗೋವಾ ಒಳಗೊಂಡ 5 ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಖ್ಯಾತ ಸಂಗೀತಗಾರ ವಿಜಯಪ್ರಕಾಶ್ ತಂಡದಿಂದ ಸಂಗೀತ ಕಾರ್ಯಕ್ರಮ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಅವರು ಕಾರ್ಯಕ್ರಮದ ನಿರೂಪಣೆ ನಡೆಸಿ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಓದಿ: ಮೈಸೂರಿನ ಶಕ್ತಿಧಾಮದ ಮಕ್ಕಳಿಂದ 'ಗಾನ ನಮನ'.. ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.