ETV Bharat / state

7 ಪಾಲಿಕೆಗಳನ್ನ ಸ್ಮಾರ್ಟ್​​​​​​​ ಸಿಟಿಯಾಗಿ ಅಭಿವೃದ್ದಿಪಡಿಸಲು  ಅನುಮತಿ: ಸಚಿವ ಬೈರತಿ ಬಸವರಾಜ

author img

By

Published : Jun 16, 2020, 8:49 AM IST

ಕಲಬುರಗಿ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದ ಅವರು, ಸ್ಮಾರ್ಟ್​​​​​​​​​ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಐದುನೂರು ಕೋಟಿ ಹಾಗೂ ರಾಜ್ಯ ಸರ್ಕಾರ ಐದುನೂರು ಕೋಟಿ ರೂ. ಅನುದಾನ ನೀಡುವುದರಿಂದ ಸಿಟಿ ಅಭಿವೃದ್ಧಿ ಪಡಿಸಲು ಸಹಕಾರಿಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ್​ ಹೇಳಿದ್ದಾರೆ.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ

ಕಲಬುರಗಿ: ರಾಜದ್ಯ 11ರಲ್ಲಿ 7 ಮಹಾನಗರ ಪಾಲಿಕೆಗಳನ್ನು ಸ್ಮಾರ್ಟ್​​​​ ಸಿಟಿಯಾಗಿ ಅಭಿವೃದ್ದಿಪಡಿಸಲು ಸರ್ಕಾರ ಅನುಮತಿ ನೀಡಿದೆ. ಉಳಿದ ನಾಲ್ಕು ಸಿಟಿಗಳನ್ನು ಸ್ಮಾರ್ಟ್​​​​ ಸಿಟಿಗಾಗಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ

ನಗರದ ಟೌನ್ ಹಾಲ್​​​​​​ನಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದ ಅವರು, ಸ್ಮಾರ್ಟ್​​​ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಐದುನೂರು ಕೋಟಿ ರೂ. ಹಾಗೂ ರಾಜ್ಯ ಸರ್ಕಾರ ಐದುನೂರು ಕೋಟಿ ರೂ. ಅನುದಾನ ನೀಡುವುದರಿಂದ ಸಿಟಿ ಅಭಿವೃದ್ಧಿ ಪಡಿಸಲು ಸಹಕಾರಿಯಾಗಿದೆ ಎಂದರು.

ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆ:

ಪೌರ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. 214 ಮನೆಗಳ ನಿರ್ಮಾಣಕ್ಕಾಗಿ 17.31 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಇದೆ ವೇಳೆ, ಕಲಬುರಗಿ ನಗರಕ್ಕೆ 24/7 ನೀರು ಪೂರೈಕೆಗಾಗಿ 838 ಕೋಟಿ ಯೋಜನೆ ರೂಪಿಸಲಾಗಿದೆ. ವಿಶ್ವ ಬ್ಯಾಂಕ್ ನೆರವಿನೊಂದಿಗೆ ಈ ಯೋಜನೆ ಪೂರ್ಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಓದಿ:ಸಸ್ಪೆಂಡ್ ಮಾಡಿ ಬಿಡ್ತೀನಿ ಹುಷಾರ್: ಪರಿಸರ ಇಂಜಿನಿಯರ್​​​ಗೆ ಸಚಿವರಿಂದ​ ಹಿಗ್ಗಾಮುಗ್ಗಾ ತರಾಟೆ

ಅಧಿಕಾರಿಗಳ ವಿರುದ್ಧ ಅಸಮಾಧಾನ:

ಕಲಬುರಗಿ ಮಹಾನಗರ ಪಾಲಿಕೆಯಿಂದ ಕೊರೊನಾ ಟಾಸ್ಕ್ ಫೋರ್ಸ್ ರಚನೆ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವ ಬೈರತಿ ಬಸವರಾಜ್, ಟಾಸ್ಕ್ ಫೋರ್ಸ್ ರಚನೆ ಮಾಡಲು ಸಮಸ್ಯೆಯೇನು?, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಎರಡು ದಿನದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಮಾಹಿತಿ ಕೊಡಿ ಎಂದು ಖಡಕ್ ವಾರ್ನಿಂಗ್ ನೀಡಿದರು. ಅಲ್ಲದೇ ಎಲ್ಲೆಲ್ಲಿ ಫಾಗಿಂಗ್ ಆಗಿಲ್ಲ, ಅಲ್ಲೆಲ್ಲ ಮಾಡಿಸಿ, ಆ್ಯಕ್ಟಿವ್ ಆಗಿ ಕೆಲಸ ಮಾಡಿ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.