ಕಲಬುರಗಿ: ಪಾದಚಾರಿ ಮಹಿಳೆ ಮೇಲೆ ಯಮಸ್ವರೂಪಿ ಲಾರಿಯೊಂದು ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಚಿತ್ತಾಪೂರ ತಾಲೂಕಿನ ರಾವೂರ್ ಗ್ರಾಮದ ಬಳಿ ನಡೆದಿದೆ.
ರಾವೂರ್ ಗ್ರಾಮದ ನಿವಾಸಿ ಸಕ್ಕುಭಾಯಿ ಡೊರ್ (50) ಮೃತ ಮಹಿಳೆ. ಹೊಲದಲ್ಲಿ ಕಟ್ಟಿಗೆ ತರಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಕಟ್ಟಿಗೆ ತೆಗೆದುಕೊಂಡು ಹಿಂದಿರುಗಿ ಮನೆಗೆ ಬರುವಾಗ ರಭಸದಿಂದ ಬಂದ ಲಾರಿ ಮಹಿಳೆಯ ಮೇಲೆ ಹರಿದಿದೆ.
ಸದ್ಯ ಲಾರಿ ಚಾಲಕ ಪರಾರಿಯಾಗಿದ್ದಾನೆ. ವಾಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.