ಕಲಬುರಗಿ: ಪಾಲಿಕೆ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವ ಮಹಬಸ್ ಮಜೀದ್ ಎಂಬಾತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಒತ್ತಾಯಿಸಿದೆ.
ಈ ಕುರಿತು ಮಾತನಾಡಿದ ವೇದಿಕೆ ರಾಜ್ಯ ಸಂಚಾಲಕ ಮಂಜುನಾಥ ನಾಲವಾರಕರ್, ಮಟನ್ ಮಾರ್ಕೆಟ್ನಲ್ಲಿನ ಪಾಲಿಕೆ ಸ್ಥಳದಲ್ಲಿ ಮಹಬಸ್ ಮಜೀದ್ ಎಂಬಾತ ಅಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದ್ದಾರೆ. ಕೂಡಲೇ ಮಜೀದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.ಪಾಲಿಕೆ ಜಾಗದಲ್ಲಿ ಕಟ್ಟಿರುವ ಮಳಿಗೆಗಳ ತೆರವುಗೋಳಿಸುವಂತೆ ಆಗ್ರಹಿಸಿದರು.