ಕಲಬುರಗಿ: ಸಂಕ್ರಾಂತಿ ಪುಣ್ಯಸ್ನಾನ ಮುಗಿಸಿ ಮರಳುವಾಗ ಹೃದಯಾಘಾತದಿಂದ ಕಮಲಾಪೂರ ತಾಲೂಕಿನ ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು (58) ಲಿಂಗೈಕ್ಯರಾಗಿದ್ದಾರೆ.
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಶಹಬಾದ ತಾಲೂಕಿನ ಹೊನಗುಂಟಾ ಗ್ರಾಮದ ಭೀಮಾ ಕಾಗಿನ ನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ನದಿಯಿಂದ ಹೊರಬರುವಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರ ಶಿಷ್ಯರು, ಸ್ಥಳೀಯರು ನದಿಯಿಂದ ಹೊರ ಕರೆತರುವಷ್ಟರಲ್ಲಿ ಶ್ರೀಗಳು ಇಹಲೋಕ ತ್ಯಜಿಸಿದ್ದರು ಎಂದು ಭಕ್ತ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಮೈಸೂರು : ಕರುಳ ಕುಡಿಯನ್ನೇ ಕೊಚ್ಚಿ ಸಾಯಿಸಿದ್ದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ
ರಾಮ ಮಂದಿರ ಧರ್ಮದರ್ಶಿ ಲಿಂಗೈಕ್ಯ:
ಕಲಬುರಗಿ ಶ್ರೀರಾಮ ಮಂದಿರದ ನಿರ್ಮಾತೃ, ಧರ್ಮದರ್ಶಿಗಳಾಗಿದ್ದ ಮತ್ತು ಅನೇಕ ಧಾರ್ಮಿಕ-ಆಧ್ಯಾತ್ಮಿಕ ಕಾರ್ಯಗಳ ರೂವಾರಿಯಾಗಿದ್ದ, ಪಾದೂರು ಸರಸ್ವತಿ ತಂತ್ರಿ ಅಮ್ಮನವರು ಇಹಲೋಕ ತ್ಯಜಿಸಿದ್ದಾರೆ. 84 ವರ್ಷದ ಅಮ್ಮನವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.