ETV Bharat / state

ಕಲಬುರಗಿಯಲ್ಲಿ ಮೂವರು ಬಲಿ, 352 ಜನರು ಸೋಂಕಿನಿಂದ ಗುಣಮುಖ

110 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದರ ಮಧ್ಯೆ 352 ಜನ ಗುಣಮುಖರಾದ್ದಾರೆ.

Kalaburagi covid  case
Kalaburagi covid case
author img

By

Published : Sep 20, 2020, 2:05 AM IST

ಕಲಬುರಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ ಮೂವರು ಸಾವನ್ನಪ್ಪಿದ್ದು, ಈ ಮೂಲಕ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 257ಕ್ಕೆ ಏರಿಕೆಯಾಗಿದೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅಫಜಲಪೂರ ತಾಲೂಕಿನ ರೇವೂರ (ಬಿ.) ಗ್ರಾಮದ 62 ವರ್ಷದ ವೃದ್ಧ (P-399298) ಸೆ.6 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸೆ.19 ರಂದು ರಂದು ನಿಧನರಾಗಿದ್ದಾರೆ. ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಚಿತ್ತಾಪುರ ತಾಲೂಕಿನ ಸ್ಟೇಷನ್ ತಾಂಡಾದ 50 ವರ್ಷದ ಮಹಿಳೆ (P-422506) ಸೆ.8 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಚಿತ್ತಾಪುರ ತಾಲೂಕಿನ ಚಿತಾವಲಿಪೇಟ್ ನಿವಾಸಿ 55 ವರ್ಷದ ಮಹಿಳೆ (P-512159) ಸೆ.15 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸೆ.17 ರಂದು ನಿಧನರಾಗಿದ್ದಾರೆ. ಇವರಿಗೆ ಕೊರೊನಾ ಸೋಂಕು ಇರುವುದು ಕನ್ಫರ್ಮ್​ ಆಗಿದೆ.

ಅದರಂತೆ ಶನಿವಾರವೂ 110 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಮಧ್ಯೆ 352 ಜನ ಗುಣಮುಖರಾದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 15,443 ಆಗಿದ್ದು, ಇದರಲ್ಲಿ ಗುಣಮುಖರಾದವರ ಸಂಖ್ಯೆ 12,672ಕ್ಕೆ ಏರಿಕೆಯಾಗಿದೆ. ಸದ್ಯ 2,514 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.