ಕಲಬುರಗಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್, ಕೊರೊನಾ ಸೋಂಕಿತರ ರೋಗಿಗಳ ವಾರ್ಡ್ ಹಾಗೂ ಬ್ಯಾರಿಕೇಡ್ ಅಳವಡಿಸಿರುವಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸಂಸ್ ಡಾ. ಉಮೇಶ್ ಜಾಧವ್ ಸೂಚಿಸಿದರು.
![CC TV Surveillance in check posts](https://etvbharatimages.akamaized.net/etvbharat/prod-images/kn-klb-02-cctv-adaptation-jadhav-ka10021_18042020181623_1804f_1587213983_565.jpg)
ಇಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಶಹಾಬಾದ್ ಹಾಗೂ ಹುಮನಾಬಾದ್ನಿಂದ ಆಗಮಿಸುವ ಚೆಕ್ ಪೋಸ್ಟ್ಗಳನ್ನು ಹೊರತುಪಡಿಸಿ ಎಲ್ಲಾ ಕಡೆ ಎಚ್ಚರಿಕೆ ವಹಿಸಬೇಕು. ಸಿಸಿಟಿವಿಗಳನ್ನು ಅಳವಡಿಸಿ, ಜಿಲ್ಲೆಗೆ ಆಗಮಿಸುವ ವಾಹನಗಳು ಹಾಗೂ ಚಾಲಕರ ಮಾಹಿತಿ ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ರೆಡ್ ಝೊನ್ ಆಗಿ ಪರಿವರ್ತನೆಯಾಗಿದೆ. ಇನ್ಮುಂದೆ ಎಲ್ಲರೂ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಕೊರೊನಾ ಸೋಂಕು ತಗುಲಿದ ರೋಗಿಯ ಖಚಿತ ಮಾಹಿತಿಯನ್ನು ತ್ವರಿತವಾಗಿ ಪೊಲೀಸ್ ಇಲಾಖೆಗೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ.ಜಬ್ಬಾರ್ ಅವರಿಗೆ ಸೂಚಿಸಿದರು.
ಮಾಹಿತಿ ಪಡೆದ ಪೊಲೀಸ್ ಇಲಾಖೆ ಅಧಿಕಾರಿಗಳು 2 ಗಂಟೆ ಒಳಗಾಗಿ ಸೋಂಕು ಖಚಿತವಾದ ರೋಗಿಯ ಕಾಲೋನಿಯ ಸುತ್ತಮುತ್ತ ಬ್ಯಾರಿಕೇಡ್ ಹಾಗೂ ಸಿಸಿಟಿವಿಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.