ಕಲಬುರಗಿ: ಮಹಾರಾಷ್ಟ್ರದಲ್ಲಿನ ಮಳೆಯ ಅಬ್ಬರಕ್ಕೆ ಭೀಮಾ ನದಿ ಉಕ್ಕಿ ಹರಿದ ಪರಿಣಾಮ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಅಫಜಲಪುರ ತಾಲೂಕಿನಲ್ಲಿ ಅತೀ ಹೆಚ್ಚು ಬೆಳೆ ನೆರೆ ಹಾವಳಿಗೆ ನಾಶವಾಗಿದೆ.
ಜನಪ್ರತಿನಿಧಿಗಳು ಕೇವಲ ವೀಕ್ಷಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಯಾವುದೇ ಪರಿಹಾರ ಕಾರ್ಯ ಮಾಡುತ್ತಿಲ್ಲ. ಕೂಡಲೇ ನಷ್ಟವನ್ನು ಸರ್ಕಾರದಿಂದ ತುಂಬಿಕೊಡಬೇಕು ಎಂಬುದು ಸಂತ್ರಸ್ತರ ಒತ್ತಾಯವಾಗಿದೆ.
ತೊಗರಿ ನಾಡು ಎಂದೇ ಕರೆಸಿಕೊಂಡ ಕಲಬುರಗಿ, ಭೀಮೆಯ ಅಟ್ಟಹಾಸಕ್ಕೆ ಕಂಗಾಲಾಗಿದೆ. ಯುದ್ಧೀಪಾದಿಯಲ್ಲಿ ಪರಿಹಾರ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು ಎಂಬುದು ನದಿ ಪಾತ್ರದ ಜನರ ಆಗ್ರಹವಾಗಿದೆ.