ETV Bharat / state

ನಿರ್ವಹಣೆ ಇಲ್ಲದೆ ಶುದ್ಧ ನೀರಿನ ಘಟಕಗಳು ಬಂದ್: ನಗರಸಭೆಯಿಂದ ಸರಿಪಡಿಸುವ ಭರವಸೆ - ಶುದ್ಧ ಕುಡಿಯುವ ನೀರಿನ ಘಟಕ

ಹಾವೇರಿ ನಗರಸಭೆಯಿಂದ ನಗರದ ವಿವಿಧೆಡೆ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿವೆ.

water-plants-shut-down-without-maintenance-haveri-promise-of-repair-by-municipal-corporation
ನಿರ್ವಹಣೆ ಇಲ್ಲದೆ ಸ್ಥಗಿತಗೊಂಡ ಶುದ್ಧ ನೀರಿನ ಘಟಕಗಳು : ನಗರಸಭೆಯಿಂದ ಸರಿಪಡಿಸುವ ಭರವಸೆ
author img

By ETV Bharat Karnataka Team

Published : Dec 27, 2023, 9:38 PM IST

Updated : Dec 27, 2023, 11:04 PM IST

ನಿರ್ವಹಣೆ ಇಲ್ಲದೆ ಶುದ್ಧ ನೀರಿನ ಘಟಕಗಳು ಬಂದ್: ನಗರಸಭೆಯಿಂದ ಸರಿಪಡಿಸುವ ಭರವಸೆ

ಹಾವೇರಿ: ನಗರಸಭೆ ವತಿಯಿಂದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸ್ಥಾಪಿಸಿರುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

2016ರಲ್ಲಿ ನಗರಸಭೆ ವತಿಯಿಂದ ಜಿಲ್ಲಾ ಕೇಂದ್ರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ನಗರದಲ್ಲಿ ನೀರಿನ ಘಟಕ ಸ್ಥಾಪಿಸಲಾಗಿತ್ತು. ಒಟ್ಟು 32 ಲಕ್ಷ ರೂಪಾಯಿ ಅನುದಾನದಲ್ಲಿ 8 ಸ್ಥಳಗಳಲ್ಲಿ ಘಟಕ ನಿರ್ಮಾಣವಾಗಿತ್ತು. ಜನರು ಈ ಘಟಕಗಳಲ್ಲಿ 2 ರೂಪಾಯಿ ನಾಣ್ಯ ಹಾಕಿ ಇಪ್ಪತ್ತು ಲೀಟರ್ ಶುದ್ಧ ಕುಡಿಯುವ ನೀರು ಪಡೆಯುತ್ತಿದ್ದರು.

ಉದ್ಘಾಟನೆಗೊಂಡ ಕೆಲ ತಿಂಗಳಲ್ಲೇ ಘಟಕಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಳ್ಳಲು ಆರಂಭಿಸಿವೆ. ಇವುಗಳ ನಿರ್ವಹಣೆಗೆ 10 ವರ್ಷಗಳ ಕಾಲ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಘಟಕಗಳನ್ನು ಸರಿಯಾಗಿ ಒಂದು ವರ್ಷವೂ ನಿರ್ವಹಣೆ ಮಾಡಿಲ್ಲ. ಇದರಿಂದ ಜನರು ಇತರ ಖಾಸಗಿ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ 10ರಿಂದ 15 ರೂಪಾಯಿ ನೀಡಿ ನೀರು ಪಡೆಯುವಂತಾಗಿದೆ.

ನೀರಿನ ಘಟಕಗಳ ಪರಿಕರಗಳು ಹಾಳಾಗಲಾರಂಭಿಸಿವೆ. ಕೆಲವು ಘಟಕಗಳು ಮುಳ್ಳು, ಪೊದೆ ಬೆಳೆದು ಹಾಳಾದರೆ, ಇನ್ನು ಕೆಲವು ಸ್ಥಳೀಯರು ಇತರ ವಸ್ತುಗಳನ್ನಿಡುವ ಕೊಠಡಿಯನ್ನಾಗಿ ಬಳಕೆ ಮಾಡುತ್ತಿದ್ದಾರೆ. ಕೆಲವು ಘಟಕಗಳಲ್ಲಿ ಬೆಲೆಬಾಳುವ ಪರಿಕರಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಲಕ್ಷಾಂತರ ರೂಪಾಯಿ ಬೆಲೆಬಾಳುವ ನೀರು ಶುದ್ದೀಕರಿಸುವ ಸಿಲಿಂಡರ್‌ಗಳು, ನೀರು ಸ್ಟಾಕ್ ಮಾಡುವ ಸ್ಟೀಲ್ ಟ್ಯಾಂಕ್‌ಗಳು ತುಕ್ಕು ಹಿಡಿಯಲಾರಂಭಿಸಿವೆ. ಈ ಕುರಿತಂತೆ ನಗರಸಭೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ನಗರಸಭೆಯು ತುಂಗಭದ್ರಾ ಮತ್ತು ಇತರ ಜಲಮೂಲಗಳಿಂದ ಹಾವೇರಿ ನಗರದ ಜನರಿಗೆ 15 ದಿನಕ್ಕೆ ಒಮ್ಮೆ ನದಿ ನೀರು ಪೂರೈಕೆ ಮಾಡುತ್ತಿದೆ. ಇದರ ಜೊತೆಗೆ ಶುದ್ದ ಕುಡಿಯುವ ನೀರಿನ ಘಟಕಗಳ ಬಗ್ಗೆಯೂ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆ ಮಾಜಿ ಅಧ್ಯಕ್ಷ ಸಂಜೀವ್ ನೀರಲಗಿ, "ಶುದ್ದ ಕುಡಿಯುವ ನೀರಿನ ಘಟಕಗಳು ಆದಷ್ಟು ಬೇಗ ಕಾರ್ಯಾರಂಭ ಮಾಡಲಿವೆ. ಈ ಘಟಕಗಳನ್ನು 10 ವರ್ಷ ಕಾಲ ನಿರ್ವಹಣೆ ಮಾಡುವುದಾಗಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಈ ರೀತಿಯಾಗಿದೆ. ಗುತ್ತಿಗೆದಾರ ತನ್ನಿಂದ ನೀರಿನ ಘಟಕಗಳನ್ನು ನಿರ್ವಹಣೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾನೆ. ಆದ್ದರಿಂದ ನಗರಸಭೆ ಬೇರೆ ಗುತ್ತಿಗೆದಾರನಿಗೆ ಐದು ವರ್ಷಕ್ಕೆ ಗುತ್ತಿಗೆ ನೀಡಿದೆ. ಆದಷ್ಟು ಬೇಗ ಶುದ್ದ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸಲಿದೆ" ಎಂದು ಹೇಳಿದರು.

ಇದನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯಕ್ಕೆ ಕಾನೂನು ಮಾಡುತ್ತಿದ್ದೇವೆ: ಸಚಿವ ತಂಗಡಗಿ

Last Updated : Dec 27, 2023, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.