ಹಾವೇರಿ: ಮದುವೆ ಸಮಾರಂಭಕ್ಕೆಂದು ಮುಂಡಗೊಡಕ್ಕೆ ತೆರಳುತ್ತಿದ್ದ ಟಾಟಾ ಏಸ್ ಗಾಡಿ ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿಗ್ಗಾವಿ ತಾಲೂಕಿನ ಮಮದಾಪೂರ ಹೆಳವ ತರ್ಲಘಟ್ಟ ಗ್ರಾಮಗಳ ದಾರಿ ಮಧ್ಯೆ ವಾಹನ ಪಲ್ಟಿಯಾಗಿದ್ದು, ಪೊರಪ್ಪ ಎಗಪ್ಪ ಚವ್ಹಾಣ (35) ಎಂಬವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 15 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿಗ್ಗಾವಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.