ETV Bharat / state

ಆಶಾ ಕಾರ್ಯಕರ್ತರ ಜೊತೆ ತೆರಳಿ ಗ್ರಾಮಸ್ಥರಿಗೆ ಮಾಸ್ಕ್​ ಹಂಚಿ ಜಾಗೃತಿ ಮೂಡಿಸಿದ ಸ್ವಾಮೀಜಿ

ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗೇಶ್ವರ ಮಹಾಸ್ವಾಮಿಗಳು ಕೊರೊನಾ ಕುರಿತು ಜಾಗೃತಿ ಮೂಡಿಸಿದ್ದಲ್ಲದೇ 5 ಸಾವಿರ ಮಾಸ್ಕ್​ಗಳನ್ನು ಗ್ರಾಮಸ್ಥರಿಕೆ ಹಂಚಿಕೆ ಮಾಡಿದ್ದಾರೆ.

ಶಿವಯೋಗೇಶ್ವರ ಸ್ವಾಮೀಜಿ
ಶಿವಯೋಗೇಶ್ವರ ಸ್ವಾಮೀಜಿ
author img

By

Published : Apr 9, 2020, 2:30 PM IST

ಹಾನಗಲ್: ಭಾರತ ಲಾಕ್ ಡೌನನಲ್ಲಿರುವ ಹಿನ್ನೆಲೆ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗೇಶ್ವರ ಮಹಾಸ್ವಾಮಿಗಳು ಇಂದು ತಮ್ಮ ಮಠದ ತೋಟದಲ್ಲಿ ಬೆಳೆದ ಲಕ್ಷಾಂತರ ಬೆಲೆ ಬಾಳುವ ಬಾಳೆ ಹಣ್ಣುಗಳು ಮತ್ತು ಐದು ಸಾವಿರ ಮಾಸ್ಕ್​ಗಳನ್ನ ಗ್ರಾಮಸ್ಥರಿಗೆ ವಿತರಿಸಿದರು.

ಗ್ರಾಮದ ಮನೆ, ಮನೆಗಳಿಗೆ ತೆರಳಿದ ಮಹಾಸ್ವಾಮಿಗಳು ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಮಾಸ್ಕ್​ಗಳನ್ನ ಹಂಚಿಕೆ ಮಾಡಿ ಸಾಮಾಜಿಕ ಕಳಕಳಿ ಮೆರೆದರು. ಶ್ರೀಗಳೊಂದಿಗೆ ಗ್ರಾಮದ ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತ್ ಸಿಬ್ಬಂದಿ, ಶ್ರೀಮಠದ ಭಕ್ತರು ಮತ್ತು ಮುಖಂಡರು ಸಾಥ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.