ETV Bharat / state

ಕಾರ್ಮಿಕರಿಗೆ ಮೀಸಲಿಟ್ಟ ಕಿಟ್​ಗಳು ಬಿಜೆಪಿ ಮುಖಂಡನ ಮನೆಯಲ್ಲಿ ಪತ್ತೆ: ಕಾಂಗ್ರೆಸ್ ಪ್ರತಿಭಟನೆ

ರಾಜ್ಯ ಸರ್ಕಾರದ ಕಾರ್ಮಿಕರ ಇಲಾಖೆ ವತಿಯಿಂದ ಲಾಕ್​ಡೌನ್ ವೇಳೆ ಕಾರ್ಮಿಕರಿಗೆ ಹಂಚಲು ನೀಡಿದ್ದ ಕಿಟ್​ಗಳು ಬಿಜೆಪಿ ಮುಖಂಡನ ಮನೆಯಲ್ಲಿ ಪ್ರತ್ಯಕ್ಷವಾಗಿ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಮುಖಂಡ ಕಲ್ಯಾಣ ಕುಮಾರ ಶೆಟ್ಟರ ವಿರುದ್ಧ ಹಾವೇರಿ ಜಿಲ್ಲಾ ಕಾಂಗ್ರೆಸ್​ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

labors kit found in BJP Leader house: congress protest near dc office
ಬಿಜೆಪಿ ಮುಖಂಡನ ಮನೆಯಲ್ಲಿ ಕಾರ್ಮಿಕರ ಕಿಟ್​​ ದೊರೆತ ಪ್ರಕರಣ: ಕಾಂಗ್ರೆಸ್​ನಿಂದ ಪ್ರತಿಭಟನೆ
author img

By

Published : May 23, 2020, 7:36 PM IST

ಹಾವೇರಿ: ಬಿಜೆಪಿ ಮುಖಂಡನ‌ ಮನೆಯಲ್ಲಿ ಕಾರ್ಮಿಕರಿಗೆ ಮೀಸಲಿಟ್ಟ ಕಿಟ್​ಗಳು ಪತ್ತೆಯಾಗಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಿನ್ನೆ ರಾತ್ರಿ ಹಾನಗಲ್ ಪಟ್ಟಣದ ಬಿಜೆಪಿ ಮುಖಂಡ ಕಲ್ಯಾಣ ಕುಮಾರ ಶೆಟ್ಟರ ಎಂಬುವರಿಗೆ ಸೇರಿದ್ದ ಮನೆಯಲ್ಲಿ ಕಾರ್ಮಿಕರಿಗೆ ವಿತರಿಸಬೇಕಿದ್ದ ಕಿಟ್​​ಗಳು ಪತ್ತೆಯಾಗಿದ್ದವು.

ಜಿಲ್ಲಾಧಿಕಾರಿ ಕಚೇರಿ ಮುಂದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಕಾರ್ಮಿಕ ಇಲಾಖೆ ಹೆಸರಿನಲ್ಲಿ ಸ್ಟಿಕ್ಕರ್ ಅಂಟಿಸಿದ್ದ ನೂರಾರು ಕಿಟ್​​ಗಳು ಬಿಜೆಪಿ ಮುಖಂಡನ ಮನೆಯಲ್ಲಿ ಪತ್ತೆ ಆಗಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್​​ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಕಾರ್ಮಿಕರಿಗೆ ವಿತರಿಸಲು ಸರ್ಕಾರ ನೀಡಿದ್ದ ಕಿಟ್​ಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗೆ ಸೇರಿದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.