ಹಾವೇರಿ: ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಆಗಮಿಸುತ್ತಿರುವ ಹಿನ್ನಲೆ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ ನಡೆಯಿತು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ್ ಬಾಲ್ದಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಗಣೇಶ ಸ್ಥಾಪನಾ ಸಮಿತಿಯ ಸದಸ್ಯರು ಮತ್ತು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಗಣೇಶ ಹಬ್ಬದಂದು ನಗರದಲ್ಲಿ ಪರಿಸರ ಪ್ರೇಮಿ ಗಣೇಶ ಮೂರ್ತಿಗಳನ್ನ ಸ್ಥಾಪಿಸುವಂತೆ ಅಧಿಕಾರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸುವ ಗಣೇಶ ಮೂರ್ತಿಗಳ ಅಲಂಕಾರ ಸಹ ಪರಿಸರಸ್ನೇಹಿಯಾಗಿರಲಿ. ಸರ್ಕಾರ ನಿಗಧಿಪಡಿಸಿರುವ ಡೆಸಿಬಲ್‌ಗಳ ಧ್ವನಿವರ್ದಕಗಳನ್ನು ಮಾತ್ರ ಬಳಸಿ. ಜನರಿಗೆ ತೊಂದರೆಯಾಗದಂತೆ ಪಟಾಕಿಗಳನ್ನು ಸಿಡಿಸುವಂತೆ ಸಭೆಯಲ್ಲಿ ಪಾಲ್ಗೊಂಡವರಿಗೆ ತಿಳಿಸಿದರು.