ETV Bharat / state

ಈಟಿವಿ ಭಾರತ ಫಲಶೃತಿ: ಕುಂಬಳಕಾಯಿ ಮಾರುಕಟ್ಟೆಗೆ ಸಾಗಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ

ಈಟಿವಿ ಭಾರತನಲ್ಲಿ ರೈತರ ಸಂಕಷ್ಟ ಕುರಿತು ಬಿತ್ತರಿಸಿದ್ದ ವರದಿಗೆ ರಾಣೆಬೆನ್ನೂರು ಶಾಸಕರು ಸ್ಪಂದಿಸಿದ್ದಾರೆ. ಮಾಕನೂರು ಗ್ರಾಮದಲ್ಲಿ ರೈತರು ಬೆಳೆದಿದ್ದ ಕುಂಬಳಕಾಯಿಗಳನ್ನು ಮಾರುಕಟ್ಟೆಗೆ ಸಾಗಿಸುವಂತೆ ಶಾಸಕ ಅರುಣಕುಮಾರ ಪೂಜಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

author img

By

Published : Apr 27, 2020, 4:57 PM IST

Haveri MLA instructs   to transport the pumpkin
ಕುಂಬಳಕಾಯಿ ಮಾರುಕಟ್ಟೆಗೆ ಸಾಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಹಾವೇರಿ ಶಾಸಕ

ಹಾವೇರಿ: ರೈತರು ಬೆಳೆದಿದ್ದ ಕುಂಬಳಕಾಯಿಗಳನ್ನು ಮಾರುಕಟ್ಟೆಗೆ ಸಾಗಿಸುವಂತೆ ಶಾಸಕ ಅರುಣಕುಮಾರ ಪೂಜಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಮಾಕನೂರು ಗ್ರಾಮದ ಶಿವನಗೌಡ ಚನ್ನಗೌಡ ಅಳವಿ ಮತ್ತು ರೇವಣಪ್ಪ ಹೊರಕೇರಿ ಎಂಬ ರೈತರು ಸುಮಾರು 10 ಎಕರೆಯಲ್ಲಿ ಕುಂಬಳಕಾಯಿ ಬೆಳೆದಿದ್ದರು. ಲಾಕ್​​ಡೌನ್​ನಿಂದ ಮಾರಾಟ ಮಾಡಲಾಗದೆ ಸುಮಾರು 40 ಲಕ್ಷ ರೂ. ವೆಚ್ಚದ ಕುಂಬಳಕಾಯಿ ಹೊಲದಲ್ಲಿ ಕೊಳೆಯುತ್ತಿದ್ದವು. ಈ ಬಗ್ಗೆ ಕುರಿತು ನಮ್ಮ ಈಟಿವಿ ಭಾರತನಲ್ಲಿ 'ಲಾಕ್​ಡೌನ್​ ಎಫೆಕ್ಟ್​: ಮಾರಾಟವಾಗದೇ ಕೊಳೆಯುತ್ತಿರುವ ಕುಂಬಳಕಾಯಿ' ಎಂಬ ಶೀರ್ಷಿಕೆಯೊಂದಿ ವರದಿ ಬಿತ್ತರಿಸಲಾಗಿತ್ತು. ಈ ವರದಿ ಬಳಿಕ ಶಾಸಕರು ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

ಇದನ್ನು ಮನಗಂಡ ಶಾಸಕ ಅರುಣಕುಮಾರ ಪೂಜಾರ ಸ್ವತಃ ಮಾಕನೂರ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಕುಂಬಳಕಾಯಿಗಳನ್ನು ಮಾರುಕಟ್ಟೆಗೆ ಸಾಗಿಸುವಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈಟಿವಿ ಭಾರತ ವರದಿ ರೈತರ ಸಮಸ್ಯೆಯನ್ನು ಬೆಳಕಿಗೆ ತಂದಿದ್ದಕ್ಕೆ ಅವರಿಗೆ ಕುಂಬಳಕಾಯಿಗಳನ್ನು ಮಾರುಕಟ್ಟೆಗೆ ಕಳಿಸಲು ಅನುಕೂಲವಾಗಿದೆ. ಅವರ ಸಂಕಷ್ಟಕ್ಕೆ ಸ್ಪಂದಿಸಿರುವ ಶಾಸಕ ಪೂಜಾರ್​ ಅವರಿಗೆ ಈಟಿವಿ ಭಾರತ ಕಡೆಯಿಂದ ಧನ್ಯವಾದ ತಿಳಿಸುತ್ತೇವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.