ETV Bharat / state

RSS ಸೂರ್ಯನಿದ್ದಂತೆ ಮೇಲೆ ಉಗಿದರೆ ಅವರ ಮುಖಕ್ಕೆ ಬೀಳಲಿದೆ: ಸಿ.ಟಿ ರವಿ - ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ

ನಾವು ನೀತಿ ರಾಜಕಾರಣ ಮಾಡ್ತಿರೋರು, ಜಾತಿ ರಾಜಕಾರಣದಲ್ಲಿ ನಂಬಿಕೆ ಇಟ್ಟವರಲ್ಲ ಎಂದು ಸಿಟಿ ರವಿ ಹೇಳಿದ್ದಾರೆ. ಪ್ರಧಾನಿ ಮೋದಿ ಯಾವುದೇ ಜಾತಿಗೆ ಸೀಮಿತವಾದ ಯೋಜನೆ ಜಾರಿ ಮಾಡಿಲ್ಲ. ಅದಕ್ಕಾಗಿ ಸಬ್​​ಕಾ ಸಾಥ್ ಸಬ್​ಕಾ ವಿಕಾಸ್ ಎಂದಿದ್ದಾರೆ. ಎಲ್ಲ ಬಡವರಿಗೂ ಯೋಜನೆ ಅನ್ವಯವಾಗುವಂತೆ ಮಾಡಿದ್ದಾರೆ ಎಂದಿದ್ದಾರೆ,

ct-ravi
ಸಿ.ಟಿ ರವಿ
author img

By

Published : Oct 26, 2021, 5:02 PM IST

ಹಾವೇರಿ: ಆರ್​​ಎಸ್​​ಎಸ್​ ಸೂರ್ಯ ಇದ್ದಂತೆ ಸೂರ್ಯನಿಗೆ ಉಗಿದರೇ ಅವರ ಮೇಲೆ ಬೀಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾನಗಲ್​​ನಲ್ಲಿ ಮಾತನಾಡಿದ ಅವರು, ಆಕಾಶಕ್ಕೆ ಉಗಿದೆ ಎಂದುಕೊಂಡರೆ ಉಗಿದವರ ಮುಖಕ್ಕೆ ಬೀಳಲಿದೆ. ಆರ್​​ಎಸ್​​ಎಸ್​ ಸೂರ್ಯ ಇದ್ದಂತೆ ಸೂರ್ಯನಿಗೆ ಉಗಿದರೇ ಅವರ ಮೇಲೆ ಬೀಳಲಿದೆ. ರಾಷ್ಟ್ರ ಕಟ್ಟುವ ಸಂಸ್ಕಾರ ಕಲಿಸುವ ಪಾಠವನ್ನ ಆರ್​ಎಸ್​ಎಸ್​ ಅದರ ಪಾಡಿಗೆ ಮಾಡಿಕೊಂಡು ಹೋಗುತ್ತಿದೆ ಎಂದಿದ್ದಾರೆ.

ಆರ್​ಎಸ್​​ಎಸ್​ ಸೂರ್ಯನಿದಂತೆ ಮೇಲೆ ಉಗಿದರೆ ಅವರ ಮುಖಕ್ಕೆ ಬೀಳಲಿದೆ: ಸಿ.ಟಿ ರವಿ

ಈ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ದಾಖಲಿಸಲಿದೆ. ದಿವಂಗತ ಸಿ.ಎಂ ಉದಾಸಿ ಅವರು ರೈತರ ಬದುಕಿಗೆ ಪರಿವರ್ತನೆ ತರೋ ಏತ ನೀರಾವರಿ ಯೋಜನೆಗಳನ್ನ ಜಾರಿಗೆ ತಂದಿದ್ದರು. ಕ್ಷೇತ್ರದಲ್ಲಿ ರಸ್ತೆ, ಕುಡಿಯೋ ನೀರು ಸೇರಿದಂತೆ ಸಂಕಷ್ಟದಲ್ಲಿರೋ ಜನರಿಗೆ ಸ್ಪಂದಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ದಿವಂಗತ ಉದಾಸಿ ಅವರಿಗೆ ಬೆಂಗಾವಲಾಗಿ ನಿಂತು ಕೆಲಸ ಮಾಡಿದವರು ಎಂದಿದ್ದಾರೆ.

ಹೆಸರಿಗೆ ಸಮಾಜವಾದಿಗಳು ಅಂತಾರೆ. ನಾನು ರಾಜಕಾರಣದಲ್ಲಿ ಅಂಥವರನ್ನ ನೋಡಿದ್ದೇವೆ. ಆದರೆ, ಅವರು ಸಮಾಜವಾದಿಗಳಲ್ಲ ಮಜಾವಾದಿಗಳು. ನಾನು ಸಮಾಜವಾದಿಯಲ್ಲ ರಾಷ್ಟ್ರೀಯವಾದಿ ಎಂದಿದ್ದಾರೆ.

ಇದನ್ನೂ ಓದಿ: ದೀಪಾವಳಿಯ ಬಲಿಪಾಡ್ಯಮಿಯ ಹಬ್ಬದ ದಿನದಂದು"ಗೋಪೂಜೆ": ಸರ್ಕಾರ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.