ETV Bharat / state

ಸಿಎಂ ನಮಗೆ 2ಎ ಮೀಸಲಾತಿ ನೀಡಿದ್ರೆ ಅವರ ಫೋಟೋ ಪೂಜಿಸುತ್ತೇವೆ: ಬಸವ ಜಯಮೃತ್ಯುಂಜಯ ಶ್ರೀ - ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ಅನಾವರಣ

ಸಿಎಂ ಬಸವರಾಜ ಬೊಮ್ಮಾಯಿ ನಮಗೆ 2ಎ ಮೀಸಲಾತಿ ನೀಡಿದರೆ ಸಮಾಜದ ಕಾರ್ಯಕ್ರಮಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಅಕ್ಕಮಹಾದೇವಿ ಫೋಟೋ ಪೂಜಿಸಿದಂತೆ ಅವರ ಪೋಟೋ ಸಹ ಪೂಜಿಸುತ್ತೇವೆ. 2ಎ ಮೀಸಲಾತಿ ನೀಡಿದರೆ ಅವರ ಹೆಸರು ಸೂರ್ಯ-ಚಂದ್ರರಿರುವವರೆಗೂ ಇರುತ್ತೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು..

ಬಸವಜಯ ಮೃತ್ಯುಂಜಯ ಶ್ರೀ
ಬಸವಜಯ ಮೃತ್ಯುಂಜಯ ಶ್ರೀ
author img

By

Published : Dec 20, 2021, 2:33 PM IST

Updated : Dec 20, 2021, 4:08 PM IST

ಹಾವೇರಿ : ಪಂಚಮಸಾಲಿಗೆ 2ಎ ಮೀಸಲಾತಿ ಹೋರಾಟದಲ್ಲಿ ಸಿಎಂ ಬೊಮ್ಮಾಯಿ ನೀಡಿರುವ ಸ್ಪಂದನೆ ಯಾವ ರಾಜ್ಯದ ಸಿಎಂ ಕೂಡ ನೀಡಿಲ್ಲ. ನಮಗೆ 2ಎ ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸವಿದೆ ಅಂತಾ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ತಿಳಿಸಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಸಿಎಂ ಆದ ಬಳಿಕ ಪ್ರಥಮ ಬಾರಿ ಭೇಟಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಪಂಚಮಸಾಲಿ ಪಾದಯಾತ್ರೆಯಲ್ಲಿ ನೀಡಿದ ಸಹಕಾರದಿಂದಲೇ ನಾನು ಮುಖ್ಯಮಂತ್ರಿಯಾದೆ ಎಂದು ತಿಳಿಸಿದ್ದರು. ಅವರು ನಮ್ಮ ಸಮಾಜವನ್ನ 2ಎಗೆ ಸೇರಿಸಿದರೆ ನಮಗೆ ಸಾವಿರ ಕೋಟಿ ರೂಪಾಯಿ ಕೊಟ್ಟಷ್ಟು ಸಂತಸವಾಗುತ್ತೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ

ಸಿಎಂ ಬಸವರಾಜ ಬೊಮ್ಮಾಯಿ ನಮಗೆ 2ಎ ಮೀಸಲಾತಿ ನೀಡಿದರೆ ಸಮಾಜದ ಕಾರ್ಯಕ್ರಮಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಅಕ್ಕಮಹಾದೇವಿ ಫೋಟೋ ಪೂಜಿಸಿದಂತೆ ಅವರ ಪೋಟೋ ಸಹ ಪೂಜಿಸುತ್ತೇವೆ. 2ಎ ಮೀಸಲಾತಿ ನೀಡಿದರೆ ಅವರ ಹೆಸರು ಸೂರ್ಯ-ಚಂದ್ರರಿರುವವರೆಗೂ ಇರುತ್ತೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀಗಳು ಮಾತನಾಡಿ, ಗುರುಗಳಾಗಲಿ ಅಥವಾ ನಾಯಕರಾಗಲಿ ಸಮಾಜಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ಮಾಡಬಾರದು. ಬದಲಿಗೆ ಸಮಾಜ ಸಮಾಜಗಳ ಬೆಸೆಯುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

1994ರಿಂದ ಪಂಚಮಸಾಲಿ ಪೀಠದ ಮೀಸಲಾತಿ ಹೋರಾಟ ಆರಂಭವಾಯಿತು. 2009ರಲ್ಲಿ ನಾವು ಜನರಲ್ ಕೆಟಗೇರಿಯಿಂದ ಒಬಿಸಿ ವರ್ಗಕ್ಕೆ ಬಂದಿದ್ದೇವೆ. ಈಗ ಮುಖ್ಯಮಂತ್ರಿಗಳಿಗೆ ಮೀಸಲಾತಿ ನೀಡುವ ಹೆಚ್ಚಿನ ಅಧಿಕಾರವಿದೆ ಎಂದು ತಿಳಿಸಿದರು. ಇದೇ ವೇಳೆ ಮಠಗಳಿಗೆ ದಾನ ನೀಡಲು ದಾನಿಗಳನ್ನು ಪ್ರೋತ್ಸಾಹಿಸಿದ ಶ್ರೀಗಳು, ಬದುಕಿದರೆ ಪುನೀತ್ ರಾಜಕುಮಾರ್ ತರಹ ಬದುಕಬೇಕು ಎಂದು ಅಭಿಪ್ರಾಯಪಟ್ಟರು.

Last Updated : Dec 20, 2021, 4:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.